ಶಿವಮೊಗ್ಗ: ತಿರುಮಲ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಕೆ. ಸತೀಶ್ ಅವರ ಟೊಯೋಟಾ ಇನ್ನೋವಾ ವಾಹನವು 9,99,999 ಕಿಲೋಮೀಟರ್ ಸಂಚರಿಸಿ ಅಪರೂಪದ ಮೈಲುಗಲ್ಲು ತಲುಪಿದೆ. ವಾಹನದ ನಿಯಮಿತ ನಿರ್ವಹಣೆ ಮತ್ತು ಸಂಸ್ಥೆಯ ಮೇಲಿನ ನಂಬಿಕೆಯ ಹಿನ್ನೆಲೆ ನಗರದ ಶಕ್ತಿ ಟೊಯೋಟಾ ಸಂಸ್ಥೆಯ ವತಿಯಿಂದ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಈ ವೇಳೆ ಮಾತನಾಡಿದ ಶಕ್ತಿ ಟೊಯೋಟಾ ಸೇವಾ ವಿಭಾಗದ ಮುಖ್ಯಸ್ಥ ನಟರಾಜ್ ಜಿ.ಎಂ., ಈ ಸಾಧನೆಯು ಟೊಯೋಟಾ ವಾಹನಗಳ ದೀರ್ಘಾಯುಷ್ಯ ಮತ್ತು ಅತ್ಯುತ್ತಮ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ತಿಳಿಸಿದರು. ಇದೇ ಸಂದರ್ಭ ಪರಿಸರ ಮಾಸಾಚರಣೆಯ ಅಂಗವಾಗಿ ಸುಸ್ಥಿರ ಬದುಕು ಮತ್ತು ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗ್ರಾಹಕರಿಗೆ ಸಸಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಕ್ತಿ ಟೊಯೋಟಾ ಸಂಸ್ಥೆಯ ಹಾಸನ ಶಾಖೆಯ ಮುಖ್ಯಸ್ಥ ಮಧು ಎಂ.ಪಿ., ಶಿವಮೊಗ್ಗ ಶಾಖೆಯ ಸರ್ವಿಸ್ ಮ್ಯಾನೇಜರ್ ಮೋಹನ್ ರಮೇಶ್, ಬಾಡಿಶಾಪ್ ಮ್ಯಾನೇಜರ್ ಅರುಣ್, ಮಾರ್ಕೆಟಿಂಗ್ ವಿಭಾಗದ ಪ್ರಮುಖ ಶ್ರೀನಿವಾಸ್ ಮತ್ತು ರಂಜಿತ್ ಸೇರಿದಂತೆ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.
