ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಎನ್.ಜೆ. ಸಚಿನ್ ಅವರಿಗೆ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಘೋಷಿಸಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ವಿಭಾಗದ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಚಿನ್ ಅವರು ಮಂಡಿಸಿದ ‘ಅಭಿವೃದ್ಧಿ ಸಂವಹನದ ಮಾಧ್ಯಮವಾಗಿ ಚಲನಚಿತ್ರ: ಆಯ್ದ ಕನ್ನಡ ಚಲನಚಿತ್ರಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.

ಎನ್.ಜೆ.ಸಚಿನ್ ಅವರು ಸೊರಬ ತಾಲೂಕಿನ ನೆಗವಾಡಿ ಗ್ರಾಮದ ಜಯಪ್ಪ ಮತ್ತು ಸುಜಾತ ದಂಪತಿಯ ಪುತ್ರ. ಸದ್ಯ ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ (ಸ್ವಾಯತ್ತ) ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:➤ ಶಿವಮೊಗ್ಗದಲ್ಲಿ ನೀಟ್ ಪರೀಕ್ಷೆ ಸುಸೂತ್ರ, ಸಾವಿರಕ್ಕು ಹೆಚ್ಚು ಅಭ್ಯರ್ಥಿಗಳು ಗೈರು, ಹೇಗಿತ್ತು ವ್ಯವಸ್ಥೆ?
