ಕೇರಳ ಲಾಟರಿಯಲ್ಲಿ ಬಹುಮಾನ ಗೆದ್ದ ಶಿಕ್ಷಕಿ, ಕೊನೆಗೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದೇಕೆ?

ಶಿವಮೊಗ್ಗ: ಕೇರಳ ಲಾಟರಿ ಬಂದಿರುವುದಾಗಿ ನಂಬಿಸಿ ಶಿಕ್ಷಕಿಯೊಬ್ಬರಿಂದ ಹಂತ ಹಂತವಾಗಿ ₹1,99,710 ಹಣ ವರ್ಗಾಯಿಸಿಕೊಂಡು ಆನ್‌ಲೈನ್ ವಂಚನೆ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಮೇ 22ರಂದು ಶಿಕ್ಷಕಿಯ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಕೇರಳ ಲಾಟರಿ ವಿಭಾಗದವನೆಂದು ಪರಿಚಯಿಸಿಕೊಂಡು ₹50 ಮೌಲ್ಯದ ಎರಡು ಲಾಟರಿ ಖರೀದಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಅನ್ನಪೂರ್ಣ ₹100 ವರ್ಗಾಯಿಸಿದ್ದರು. ಆ ಬಳಿಕ ವಾಟ್ಸಾಪ್‌ನಲ್ಲಿ ಲಾಟರಿ ಗೆದ್ದಿರುವ ಚಿತ್ರವನ್ನು ಕಳುಹಿಸಿದ ವಂಚಕರು, ಬಹುಮಾನದ ಹಣ ವಿತ್‌ಡ್ರಾ ಮಾಡಲು ಟಿಡಿಎಸ್, ಟ್ಯಾಕ್ಸ್ ಹಾಗೂ ಇತರೆ ಶುಲ್ಕ ಪಾವತಿಸಬೇಕು ಎಂದು ನಂಬಿಸಿದ್ದಾರೆ.

Shimogga-Cyber-Crime-CEN-Police-Station

ವಂಚಕನ ಮಾತು ನಂಬಿದ ಶಿಕ್ಷಕಿ ಮೇ 22ರಿಂದ ಜೂನ್ 4ರ ನಡುವೆ ಒಟ್ಟು ₹1,99,710 ಹಣವನ್ನು ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದರು. ಕೊನೆಗೆ ಬಹುಮಾನದ ಹಣ ನೀಡದೆ ಇದ್ದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion