ಶಿವಮೊಗ್ಗದಲ್ಲಿ ಚುರುಕು ಪಡೆಯುತ್ತಿದೆ ಆರಿದ್ರಾ ಮಳೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

ಶಿವಮೊಗ್ಗ: ಜಿಲ್ಲೆಯಲ್ಲಿ ಆರಿದ್ರಾ ಮಳೆ ಬಿರುಸು ಪಡೆಯುತ್ತಿದೆ. ಜೂನ್‌ 22ರ ಬೆಳಗ್ಗೆ 8:30 ರಿಂದ ಜೂನ್‌ 23ರ ಬೆಳಗ್ಗೆ 8:30ವರೆಗೆ 50.30 ಮಿ.ಮೀ ಮಳೆಯಾಗಿದೆ. ಸಾಗರ ತಾಲೂಕಿನಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಸಾಗರ ತಾಲೂಕಿನಲ್ಲಿ 24 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 11.70 ಮಿ.ಮೀ ಹಾಗೂ ಹೊಸನಗರ ತಾಲೂಕಿನಲ್ಲಿ 8.40 ಮಿ.ಮೀ ನಷ್ಟು ಮಳೆ ಬಿದ್ದಿದೆ. ಇನ್ನು ಸೊರಬ ತಾಲೂಕಿನಲ್ಲಿ 4.30 ಮಿ.ಮೀ, ಶಿಕಾರಿಪುರದಲ್ಲಿ 1.10 ಮಿ.ಮೀ ಮತ್ತು ಶಿವಮೊಗ್ಗ ತಾಲೂಕಿನಲ್ಲಿ 0.70 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ 0.10 ಮಿ.ಮೀ ನಷ್ಟು ಸಾಧಾರಣ ಮಳೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

Bike-Riders-holds-umbrella-in-rain-near-mathura-paradise-in-Shimoga-city.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion