ಶಿವಮೊಗ್ಗ: ತಾಲೂಕಿನ ಹೊಳಲೂರು ಗ್ರಾಮದ ಅಡಿಕೆ ತೋಟವೊಂದರಿಂದ ಬೋರ್ವೆಲ್ ಮೋಟಾರ್ ಹಾಗೂ ಕೇಬಲ್ ವೈಯರ್ ಕಳ್ಳತನ ಮಾಡಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ನಗರದ ಕೃಷಿ ನಗರದ ಹೆಚ್.ಇ.ಮಂಜಪ್ಪ ಅವರಿಗೆ ಸೇರಿದ ತೋಟದಲ್ಲಿ ಕಳ್ಳತನ ನಡೆದಿದೆ. ಮಂಜಪ್ಪ ಅವರು ತಮ್ಮ ಅಡಿಕೆ ತೋಟದ ಬೋರ್ವೆಲ್ಗೆ ₹20,000 ಮೌಲ್ಯದ 5 ಎಚ್.ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಿದ್ದರು. ಇತ್ತೀಚೆಗೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಕಳ್ಳತನ ಬೆಳಕಿಗೆ ಬಂದಿದೆ. ಬೋರ್ವೆಲ್ ಮೋಟಾರ್ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ₹12,000 ಮೌಲ್ಯದ 350 ಅಡಿ ಉದ್ದದ ಕೇಬಲ್ ವೈಯರ್ ಅನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕಳ್ಳತನವಾಗಿರುವ ಒಟ್ಟು ಸ್ವತ್ತಿನ ಅಂದಾಜು ಮೌಲ್ಯ ₹32,000 ಎನ್ನಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
