ಭದ್ರಾವತಿ: ಚನ್ನಗಿರಿ – ಜೋಳದಾಳ್ ರಸ್ತೆಯ ಕಲ್ಲಾಪುರ ಗ್ರಾಮದ ಬಳಿ ರಸ್ತೆಗೆ ಅಡ್ಡ ಬಂದ ಪ್ರಾಣಿ ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಗೌಡೇಹಟ್ಟಿ ಗ್ರಾಮದ ಪುನೀತ್ ಜಿ.ಆರ್ (25) ಮೃತ ಯುವಕ. ಈತ ಭದ್ರಾವತಿಯ ಫೈನಾನ್ಸ್ ಕಂಪನಿಯೊಂದರಲ್ಲಿ ಕಲೆಕ್ಷನ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ಹೇಗಾಯ್ತು ಘಟನೆ?
ಪುನೀತ್, ಜೂನ್ 23ರಂದು ರಾತ್ರಿ 7:50ರ ಸುಮಾರಿಗೆ ಚನ್ನಗಿರಿಯಿಂದ ಕಲೆಕ್ಷನ್ ಮುಗಿಸಿಕೊಂಡು ಬೈಕ್ನಲ್ಲಿ ಭದ್ರಾವತಿಗೆ ಮರಳುತ್ತಿದ್ದರು. ಕಲ್ಲಾಪುರ ಗ್ರಾಮದ ಬಳಿ ರಸ್ತೆಗೆ ಪ್ರಾಣಿಯೊಂದು ಅಡ್ಡ ಬಂದಾಗ, ಅದನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಭದ್ರಾವತಿಯ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜೂನ್ 24ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.