ತ್ಯಾಗರ್ತಿ ಬಂದ್‌ಗೆ ದಿನಾಂಕ ಪ್ರಕಟ, ಕಾರಣವೇನು?

ತ್ಯಾಗರ್ತಿ: ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿರುವ ಗ್ರಿಡ್ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ಆಗ್ರಹಿಸಿ ಜುಲೈ 2ರಂದು ತ್ಯಾಗರ್ತಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ ಎಂದು ವಿದ್ಯುತ್ ಗ್ರಿಡ್ ಹೋರಾಟ ಸಮಿತಿ ಮುಖಂಡರಾದ ಕುಮಾರಸ್ವಾಮಿ ಕೊಪ್ಪ, ಶ್ರೀನಾಥ್ ನೀಚಡಿ, ಕೃಷ್ಣಮೂರ್ತಿ ಹೊಸಂತೆ ತಿಳಿಸಿದ್ದಾರೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲವು ವರ್ಷಗಳಿಂದ ತ್ಯಾಗರ್ತಿ, ಬರೂರು, ಹಿರೇಬಿಲಗುಂಜಿ, ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಕೃಷಿ ಚಟುವಟಿಕೆಗಳಿಗೆ ಅಸಮರ್ಪಕ ವಿದ್ಯುತ್ ಲಭಿಸುತ್ತಿದೆ. ಈ ಅವ್ಯವಸ್ಥೆ ಸರಿಪಡಿಸಲು ತ್ಯಾಗರ್ತಿಯಲ್ಲಿ 110 ಕೆವಿ ಗ್ರಿಡ್ ಸ್ಥಾಪಿಸಲಾಗುತ್ತಿದೆ.

TYAGARTI-NEWS-GRAPHICS-BY-SHIVAMOGGA-LIVE.

ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ತ್ವರಿತಗತಿವಾಗಿ ಕಾಮಗಾರಿ ಪೂರ್ಣಗೊಳಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಬಂದ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ, ಫಲಾನುಭವಿಗಳಿಗೆ ಮಹತ್ವದ ಸಲಹೆ, ಏನದು?