ಲಿಂಗನಮಕ್ಕಿ ನೀರಿನ ಮಟ್ಟ ತುಸು ಏರಿಕೆ, ತುಂಗಾ ಡ್ಯಾಂ ಒಳ ಹರಿವು ಚೇತರಿಕೆ, ಭದ್ರಾ ಡ್ಯಾಂ ಸ್ಥಿತಿ ಹೇಗಿದೆ?

ಜಲಾಶಯಗಳ ವರದಿ: ರಾಜ್ಯಾದ್ಯಂತ ಮುಂಗಾರು ಚುರುಕು ಪಡೆದಿದೆ. ಮಲೆನಾಡು ಭಾಗದಲ್ಲಿ ದಟ್ಟ ಮೋಡ ಆವರಿಸಿದ್ದು, ಮಳೆ ಮುಂದುವರೆದಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ ಒಳ ಹರಿವು ತುಸು ಹೆಚ್ಚಳವಾಗಿದೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 0.70 ಅಡಿಯಷ್ಟು ಏರಿಕೆಯಾಗಿದೆ. ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ಬಿರುಸು ಪಡೆದುಕೊಳ್ಳುತ್ತಿವೆ.

Linganamakki-Dam-in-Sharavathi-River

ಯಾವ್ಯಾವ ಡ್ಯಾಂ ನೀರಿನ ಮಟ್ಟ ಎಷ್ಟಿದೆ?

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಜಲಮಟ್ಟ: 1745.50 ಅಡಿ (ಕಳೆದ ವರ್ಷ ಇದೇ ದಿನ: 1785.15 ಅಡಿ)
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 14.68 ಟಿಎಂಸಿ
  • ಒಳಹರಿವು: 9568 ಕ್ಯೂಸೆಕ್
  • ಹೊರಹರಿವು: 3548 ಕ್ಯೂಸೆಕ್
  • ಮಳೆ ಪ್ರಮಾಣ: 79 ಮಿ.ಮೀ

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 136 ಅಡಿ 8¼ ಇಂಚು (ಕಳೆದ ವರ್ಷ ಇದೇ ದಿನ: 162 ಅಡಿ 9 ಇಂಚು)
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 24.687 ಟಿಎಂಸಿ
  • ಒಳಹರಿವು: 211 ಕ್ಯೂಸೆಕ್
  • ಹೊರಹರಿವು: 211 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 587.99 ಮೀಟರ್ (ಕಳೆದ ವರ್ಷ ಇದೇ ದಿನ: 587.90 ಮೀಟರ್)
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 3.102 ಟಿಎಂಸಿ
  • ಒಳಹರಿವು: 866 ಕ್ಯೂಸೆಕ್
  • ಹೊರಹರಿವು: 127 ಕ್ಯೂಸೆಕ್
ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!