ಶಿವಮೊಗ್ಗ: ಆರೋಗ್ಯ, ಪರಿಸರ ರಕ್ಷಣೆ, ಕ್ರೀಡಾ ಸಂಸ್ಕೃತಿ ಹಾಗೂ ವಿಶೇಷ ಚೇತನರ ಸಬಲೀಕರಣದ ಸಂದೇಶದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರನ್ ಮಲೆನಾಡು ಮ್ಯಾರಥಾನ್‌ಗೆ ಉತ್ತಮ ಜನ ಬೆಂಬಲ ವ್ಯಕ್ತವಾಯಿತು. ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಈ ಓಟದಲ್ಲಿ ಮಳೆಯನ್ನೂ ಲೆಕ್ಕಿಸದೆ ನಾಲ್ಕು ಸಾವಿರಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ನಗರದ ನೆಹರು ಕ್ರೀಡಾಂಗಣದ ಮುಂಭಾಗದಿಂದ ಆರಂಭಗೊಂಡ ಮ್ಯಾರಥಾನ್ ಓಟಕ್ಕೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಲೆನಾಡಿನ ಸುಂದರ ವಾತಾವರಣವನ್ನು ಶ್ಲಾಘಿಸಿದರು.

ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಮಾತನಾಡಿ, ‘ಒಂದೊಳ್ಳೆ ಉದ್ದೇಶಕ್ಕಾಗಿ ಆಯೋಜಿಸಿದ್ದ ಈ ಓಟಕ್ಕೆ ಮಲೆನಾಡಿನ ಜನತೆ ಐತಿಹಾಸಿಕ ಬೆಂಬಲ ನೀಡಿದ್ದಾರೆ’ ಎಂದರು.
ಸ್ಪರ್ಧೆಯಲ್ಲಿ ಮಕ್ಕಳು, ಹಿರಿಯರು, ದಂಪತಿ ಹಾಗೂ ವಿಶೇಷ ಚೇತನರು ಉತ್ಸಾಹದಿಂದ ಓಡಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಮುಖಂಡರಾದ ಎಂ. ಶ್ರೀಕಾಂತ್, ಕೆ. ರಂಗನಾಥ್, ವಿಜಯ್ ಕುಮಾರ್ ದನಿ, ಹೆಚ್. ಪಾಲಾಕ್ಷಿ, ರೇಖಾ ರಂಗನಾಥ್, ಎಂ. ಪ್ರವೀಣ್ ಕುಮಾರ್, ಎಂ. ಸೋನಿಯಾ, ಗಿರೀಶ್ ಸೇರಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.