ಸುಲಭಕ್ಕೆ ₹5 ಲಕ್ಷ ಸಾಲ, ಶಿವಮೊಗ್ಗ ರೈತನಿಗೆ ಕಾದಿತ್ತು ಆಘಾತ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಯೋಜನೆ (PMEGP) ಅಡಿ ₹5 ಲಕ್ಷ ವೈಯಕ್ತಿಕ ಸಾಲ ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಂದ ₹2,69,800 ಪಡೆದು ವಂಚಿಸಿರುವ ಘಟನೆ ನಡೆದಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ರೈತರೊಬ್ಬರು ಫೇಸ್‌ಬುಕ್ ನೋಡುತ್ತಿದ್ದಾಗ PMEGP ಯೋಜನೆಯಡಿ ಸಾಲ ನೀಡುವ ಕುರಿತಾದ ವಿಡಿಯೋವೊಂದು ಕಂಡುಬಂದಿತ್ತು. ಅದರಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮಗೆ ₹5 ಲಕ್ಷ ಸಾಲ ಬೇಕೆಂದು ಅವರು ಮನವಿ ಮಾಡಿದ್ದರು. ಕರೆ ಮಾಡಿದಾಗ ಮಾತನಾಡಿದವರು ತಾವು PMEGP ಯೋಜನೆಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ, ಸಾಲದ ಹಣ ಬಿಡುಗಡೆ ಮಾಡಲು ಇನ್ಸೂರೆನ್ಸ್, ಮೂರು ತಿಂಗಳ ಇಎಂಐ ಮುಂಗಡ ಪಾವತಿ, ಶೇ.3ರಷ್ಟು ಕಮಿಷನ್ ಹಾಗೂ ತೆರಿಗೆ ಪಾವತಿಸಬೇಕೆಂದು ವಿವಿಧ ಕಾರಣಗಳನ್ನು ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Shimogga-Cyber-Crime-CEN-Police-Station

ಇದನ್ನು ನಿಜ ಎಂದು ನಂಬಿದ ಶಿವಮೊಗ್ಗದ ರೈತ ತಮ್ಮ ಬ್ಯಾಂಕ್ ಖಾತೆಗಳಿಂದ ಗೂಗಲ್ ಪೇ ಮತ್ತು RTGS ಮೂಲಕ ಹಂತ-ಹಂತವಾಗಿ ಒಟ್ಟು ₹2,69,800 ಹಣವನ್ನು ಆರೋಪಿಗಳು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದರು. ಹಣ ಪಡೆದ ನಂತರವೂ ಸಾಲ ನೀಡದೆ, ಮತ್ತೆ ಹೆಚ್ಚಿನ ಹಣ ವರ್ಗಾಯಿಸುವಂತೆ ಆರೋಪಿಗಳು ಪೀಡಿಸಿದಾಗ ದೂರುದಾರರಿಗೆ ಮೋಸ ಹೋಗಿರುವುದು ಅರಿವಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!