ವಿಮಾನದ ಟಿಕೆಟ್‌ ಹೆಸರಿನಲ್ಲಿ ಉದ್ಯಮಿಯ ಖಾತೆಗೆ ₹11.09 ಲಕ್ಷ ವಂಚನೆ, ಹೇಗಾಯ್ತು ಮೋಸ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ವಿಮಾನ ಟಿಕೆಟ್ ಬುಕಿಂಗ್ ಮಾಡಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ₹11,09,000 ವಂಚಿಸಲಾಗಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಉದ್ಯಮಿಯೊಬ್ಬರಿಗೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿ ವಂಚನೆ ಎಸಗಲಾಗಿದೆ. ವಿಮಾನ ಟಿಕೆಟ್ ಬುಕಿಂಗ್ ನೀಡುವುದಾಗಿ ನಂಬಿಸಿ ಉದ್ಯಮಿಯ ವೈಯಕ್ತಿಕ ಮಾಹಿತಿಯನ್ನು ವಂಚಕರು ಪಡೆದುಕೊಂಡಿದ್ದರು. ನಂತರ ರಿಜಿಸ್ಟ್ರೇಷನ್ ಫೀ ಸೇರಿದಂತೆ ವಿವಿಧ ಕಾರಣಗಳನ್ನು ಹೇಳಿ ಜೂನ್ 17 ರಿಂದ ಜೂನ್ 20ರವರೆಗೆ ಹಂತ ಹಂತವಾಗಿ ಉದ್ಯಮಿ, ಅವರ ಪತ್ನಿ ಮತ್ತು ಪುತ್ರನ ಬ್ಯಾಂಕ್ ಖಾತೆಗಳಿಂದ ಒಟ್ಟು ₹11,09,000 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.  

Shimogga-Cyber-Crime-CEN-Police-Station

ಕೊನೆಗೆ ಟಿಕೆಟ್ ನೀಡದೆ ಸಬೂಬು ಹೇಳಿದ್ದು, ಉದ್ಯಮಿಯು ಹಣ ವಾಪಸ್ ಕೇಳಿದಾಗ ಹೆಚ್ಚುವರಿ ಹಣ ನೀಡುವುದಾಗಿ ವಂಚಕರು ನಂಬಿಸಿದ್ದರು. ಆದೆರೆ ಹಣ ವಾಪಸ್ ಬಾರದ ಹಿನ್ನೆಲೆ ವಂಚನೆಗೊಳಗಾಗಿರುವುದು ಅರಿವಾಗಿದೆ. ಘಟನೆ ಸಂಬಂಧ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.