ಶಿವಮೊಗ್ಗ: ಇಲ್ಲಿನ ಶರಾವತಿ ನಗರದಲ್ಲಿ ಗುರುವಾರ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದಿನಿ (24) ನೇಣಿಗೆ ಶರಣಾಗಿದ್ದಾರೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಪೋಷಕರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಅವರ ಪತಿ ಸ್ಟೀವನ್ ವಿರುದ್ಧ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗದ ಶರಾವತಿ ನಗರದ ನಿವಾಸಿ ನಂದಿನಿ 4 ವರ್ಷಗಳ ಹಿಂದೆ ಶಿಕಾರಿಪುರ ಮೂಲದ ಸ್ಟೀವನ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿ 2 ವರ್ಷ ಶಿಕಾರಿಪುರದಲ್ಲಿ ವಾಸವಿದ್ದು, ನಂತರ ಉದ್ಯೋಗದ ನಿಮಿತ್ತ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿದ್ದರು.
ಸ್ಟೀವನ್ ನಗರದ ಎನ್.ಟಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರೆ, ನಂದಿನಿ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.
(ಖಿನ್ನತೆ ಇದ್ದರೆ ಇಲ್ಲವೇ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ; ಟೆಲಿಮನಸ್-14416 ಅಥವಾ ಸಹಾಯ್-080 25497777, 9886444075)