ಪೂಜೆ ಮುಗಿಸಿ ಹೊರ ಬರುವಷ್ಟರಲ್ಲಿ ಪುರೋಹಿತರ ಬೈಕ್‌ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ನಗರದ ಮಹಾತ್ಮ ಗಾಂಧಿ ಪಾರ್ಕ್ ಸಮೀಪದ ಚೌಕಿ ಮಠದ ಮುಂದೆ ನಿಲ್ಲಿಸಿದ್ದ ಪುರೋಹಿತರೊಬ್ಬರ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ.

ವಿರೂಪಾಕ್ಷಯ್ಯ ಎಂಬುವವರು ಜುಲೈ 21ರಂದು ಸಂಜೆ ತಮ್ಮ ತಂದೆಯೊಂದಿಗೆ ವೀರಶೈವ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಚೌಕಿ ಮಠಕ್ಕೆ ಪೂಜೆಗಾಗಿ ತೆರಳಿದ್ದರು. ಬೈಕನ್ನು ಮಠದ ಮುಂಭಾಗದಲ್ಲಿ ನಿಲ್ಲಿಸಿ ಲಾಕ್ ಮಾಡಿ ಒಳಗೆ ಹೋಗಿದ್ದರು. ಪೂಜೆ ಮುಗಿಸಿ ರಾತ್ರಿ ವಾಪಸ್ ಬಂದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ಗೊತ್ತಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Kote Police station building