ಶಿವಮೊಗ್ಗ: ತಾಲೂಕಿನ ಉಂಬ್ಳೇಬೈಲು ಸಮೀಪದ ಮರಾಠಿ ಕ್ಯಾಂಪ್ ಬಳಿ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲು ನಿವಾಸಿ ವಿಜಯೇಂದ್ರ (45) ಮೃತ ದುರ್ದೈವಿ. ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಒಂದು ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ವಿಜಯೇಂದ್ರ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತುಂಗಾನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:➤ ಬರ ಪರಿಸ್ಥಿತಿ ಅವಲೋಕನಕ್ಕೆ ಗ್ರಾಮಗಳಿಗೆ ಭೇಟಿ, ರೈತರ ಅಳಲು ಆಲಿಸಿದ ಶಾಸಕಿ, ಅಧಿಕಾರಿಗೆ ಪ್ರಮುಖ ಸೂಚನೆ
ಇದನ್ನೂ ಓದಿ:➤ ಲಿಂಗನಮಕ್ಕಿ ಡ್ಯಾಮ್ ನೀರಿನ ಮಟ್ಟ 3.90 ಅಡಿ ಹೆಚ್ಚಳ, ತುಂಗಾ ಡ್ಯಾಮ್ ಒಳಹರಿವು ಏರಿಕೆ, ಭದ್ರಾ ಸ್ಥಿತಿ ಹೇಗಿದೆ?