ಶಿವಮೊಗ್ಗ: ನಗರದ ಎನ್.ಟಿ. ರಸ್ತೆಯ ಪಿಡಬ್ಲುಡಿ ವಸಿತಿಗೃಹದ ಗೇಟ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಚಂದ್ರಶೇಖರ್ ಎಂಬುವವರ ಹೀರೋ ಹೋಂಡಾ ಪ್ಯಾಷನ್ ಪ್ಲಸ್ ಬೈಕ್ ನಾಪತ್ತೆಯಾಗಿದೆ. ➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಚಂದ್ರಶೇಖರ್ ಅವರು ತಮ್ಮ ಬೈಕನ್ನು ಮನೆಯ ಗೇಟ್ ಮುಂದೆ ನಿಲ್ಲಿಸಿ, ಅದರ ಕೀಯನ್ನು ಗಾಡಿಯಲ್ಲೇ ಬಿಟ್ಟು ಹೋಗಿದ್ದರು. ಸಂಜೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ಇರಲಿಲ್ಲ. ಬೈಕ್ನ ಮೌಲ್ಯ ₹59,000 ಅಂದಾಜಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
