‘ಹಣದ ವ್ಯವಹಾರ ಜಗಜ್ಜಾಹೀರಾಗಿದೆ’, ಸರ್ಕಾರದ ವಿರುದ್ಧ ಡಾ. ಸರ್ಜಿ ಆಕ್ರೋಶ, ಏನೇನೆಲ್ಲ ಆರೋಪಿಸಿದರು?

ಶಿವಮೊಗ್ಗ: ಪಶು ವೈದ್ಯಾಧಿಕಾರಿ ನೇಮಕದಲ್ಲಿ ನಡೆದಿದೆ ಎನ್ನಲಾದ ಹಣದ ವ್ಯವಹಾರ ಜಗಜ್ಜಾಹೀರಾಗಿದ್ದು, ಕೆಪಿಎಸ್‌ಸಿ ಇಲಾಖೆ ಈಗ ಕ್ಯಾಶ್ ಪೋಸ್ಟ್ ಸೆಂಟರ್ ಕಾಂಗ್ರೆಸ್ ಪಾರ್ಟಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ವಾಗ್ದಾಳಿ ನಡೆಸಿದರು.➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಮೂರೂವರೆ ವರ್ಷವಾದರೂ ಹೇಳಿದಂತೆ ನಡೆದುಕೊಳ್ಳದೆ ವಿದ್ಯಾರ್ಥಿಗಳ ಮೂಗಿಗೆ ತುಪ್ಪ ಸವರುತ್ತಿದೆ ಎಂದು ದೂರಿದರು.

Dr-Dhananjaya-Sarji-Press-meet-in-Shimoga-

ಸರ್ಜಿ ಆರೋಪಗಳೇನು? ಇಲ್ಲಿವೆ ಪಾಯಿಂಟ್ಸ್

Point-1

ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದರೂ, ಸರ್ಕಾರ ಈ ಕುರಿತು ಯಾವ ತನಿಖೆ ನಡೆಸಿ ಕ್ರಮ ಕೈಗೊಂಡಿದೆ ಎಂಬುದನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದರು.

Point-2

ಎಇಇ ಪರೀಕ್ಷೆಯಲ್ಲೂ ಹಣ ಓಡಾಡುತ್ತಿದ್ದು, ಈ ಸರ್ಕಾರದಲ್ಲಿ ಹುದ್ದೆಗಳ ಅಧಿಸೂಚನೆ ಹೊರಡಿಸಲು ತಡ ಮಾಡುವುದು ಹಾಗೂ ಹಣಕ್ಕಾಗಿ ಬೇಡಿಕೆ ಇಡುವುದೇ ಕಾಯಕವಾಗಿದೆ ಎಂದರು.

Point-3

ಭಾನುವಾರ ನಡೆದ ಪೊಲೀಸ್ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದು, ವಿರೋಧ ಪಕ್ಷದವರು ರಾಜೀನಾಮೆ ಕೇಳಿದರೆ ಗೃಹ ಸಚಿವರು ಜವಾಬ್ದಾರಿಯುತವಾಗಿ ಮಾತನಾಡದೆ ಧಿಮಾಕಿನ ಧೊರಣೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Point-4

ರಾಜ್ಯದಲ್ಲಿ 249 ನಕಲಿ ಪಿಎಚ್‌ಡಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ 153 ಕಲಬುರಗಿಯಲ್ಲೇ ಇವೆ. ಈ ಅಕ್ರಮಕ್ಕೆ ಗೃಹ ಸಚಿವರೇ ಕುಮ್ಮಕ್ಕು ನೀಡುತ್ತಿದ್ದಾರೆಂಬ ಸಂಶಯವಿದೆ ಎಂದರು.

Point-5

ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಹಾಗೂ ಇತರೆಡೆ ಪ್ರತಿಭಟನೆಗಳಲ್ಲಿ ನಿರತರಾಗಿರುತ್ತಾರೆಯೇ ಹೊರತು ರಾಜ್ಯದಲ್ಲಿ ನಡೆಯುವ ಹಗರಣಗಳು ಕಾಣಿಸುವುದಿಲ್ಲ. ಇನ್ನು ಮುಂದಾದರೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡದೆ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಿ ಕಷ್ಟಪಟ್ಟು ಓದುವ ಅರ್ಹರಿಗೆ ಹುದ್ದೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ, ದರ್ಶನ್, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್.ಎಸ್, ಮಂಜುನಾಥ್.ಎನ್, ಶರತ್ ಕಲ್ಯಾಣಿ ಮತ್ತಿತರರು ಉಪಸ್ಥಿತರಿದ್ದರು.