ಶಿವಮೊಗ್ಗ ಸಿಟಿಯ ವಿವಿಧೆಡೆ ಆಗಸ್ಟ್‌ 9ರಂದು ಕರೆಂಟ್‌ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ: ಮೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಆಗಸ್ಟ್ 9ರಂದು ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ವ್ಯಾಪ್ತಿಗೆ ಬರುವ ಮಲ್ಲಿಗೇನಹಳ್ಳಿ, ತ್ಯಾವರೆಕೊಪ್ಪ, ಮುದ್ದಿನಕೊಪ್ಪ, ಸಿದ್ಲಿಪುರ, ಆಲ್ದೇವರ ಹೊಸೂರು, ವಿರುಪಿನಕೊಪ್ಪ, ಗಿರಿದೀಪಂ ಶಾಲೆ, ಲಯನ್ ಸಫಾರಿ, ಭೋವಿ ಕಾಲೋನಿ, ಸಾಗರ ಮುಖ್ಯರಸ್ತೆ, ಗಾಡಿಕೊಪ್ಪ, ಆಲ್ಕೊಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

power cut mescom ELECTRICITY

ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ

ಪಂಚವಟಿ ಕಾಲೋನಿ, ಬಿ.ಹೆಚ್. ರಸ್ತೆ, ಅಶೋಕ ವೃತ್ತದಿಂದ ಅಮೀರ್ ಅಹಮದ್ ವೃತ್ತದವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.