ದೇವಸ್ಥಾನದ ಸಮೀಪವಿದ್ದ ಶ್ರೀಗಂಧದ ಮರಗಳು ಕಳ್ಳತನ, ಕೇಸ್‌ ದಾಖಲು

ಶಿಕಾರಿಪುರ: ಪಟ್ಟಣದ ಮೆಸ್ಕಾಂ ಕಚೇರಿ ಆವರಣದಲ್ಲಿ ಗಣಪತಿ ದೇವಸ್ಥಾನದ ಸಮೀಪ ಇದ್ದ ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿದೆ.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕಳವು ನಡೆದು 3 ರಿಂದ 4 ದಿನಗಳು ಕಳೆದರೂ ಯಾರಿಗೂ ಗೊತ್ತಾಗಿರಲಿಲ್ಲ. ಈ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಶ್ರೀಗಂಧದ ಮರಗಳು 3 ರಿಂದ 4 ಅಡಿ ಎತ್ತರ ಹಾಗೂ 8 ಇಂಚು ಸುತ್ತಳತೆ ಹೊಂದಿದ್ದವು. ಮರದ ಮುಖ್ಯ ತುಂಡುಗಳನ್ನು ಕಳ್ಳರು ಹೊತ್ತೂಯ್ದಿದ್ದು, ರೆಂಬೆ-ಕೊಂಬೆಗಳನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

SHIKARIPURA-NEWS-GRAPHICS-BY-SHIVAMOGGA-LIVE.