ಬೈಕಿನಲ್ಲಿ ಬಂದು ಫಾರಂನಿಂದ ಕೋಳಿ ಆಹಾರ ಕಳ್ಳತನ, ಪ್ರಶ್ನಿಸಿದವರಿಗೆ ಜೀವ ಬೆದರಿಕೆ

ಶಿಕಾರಿಪುರ: ತಾಲೂಕಿನ ಶೀಲವಂತನಕೊಪ್ಪ ಗ್ರಾಮದ ಜಮೀನಿನಲ್ಲಿರುವ ಕೋಳಿ ಫಾರಂಗೆ ನುಗ್ಗಿ ಕೋಳಿ ಆಹಾರದ ಚೀಲ ಕಳವು ಮಾಡಿದ್ದಲ್ಲದೆ, ಪ್ರಶ್ನಿಸಿದವರಿಗೆ ಜೀವ ಬೆದರಿಕೆ ಹಾಕಿದ ಇಬ್ಬರು ಯುವಕರು ಬೈಕಿನಲ್ಲಿ ಪರಾರಿಯಾಗಿಯಾಗಿದ್ದಾರೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ₹2500 ಮೌಲ್ಯದ ಕೋಳಿ ಆಹಾರದ ಚೀಲವನ್ನು ಕಳವು ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ಪ್ರಶ್ನಿಸಿದ ಫಾರಂ ಮಾಲೀಕ ರಾಮಚಂದ್ರಪ್ಪ ಅವರ ಪುತ್ರನಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿ ಆಹಾರದ ಚೀಲದೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

SHIKARIPURA-NEWS-GRAPHICS-BY-SHIVAMOGGA-LIVE.

ಇದಕ್ಕೂ ಮುನ್ನವೂ ಫಾರಂನಲ್ಲಿದ್ದ ಕೋಳಿ ಆಹಾರದ 48 ಚೀಲಗಳು ನಾಪತ್ತೆಯಾಗಿದ್ದವು. ಇವುಗಳನ್ನು ಈ ಆರೋಪಿಗಳೇ ಕಳವು ಮಾಡಿರಬಹುದು ಎಂದು ಶಂಕಿಸಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.