ಭದ್ರಾವತಿ: ಮೆಸ್ಕಾಂ ಗ್ರಾಮಾಂತರ ಉಪ ವಿಭಾಗದಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆ ಆಗಸ್ಟ್ 10ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಬಾರಂದೂರು, ಹಳ್ಳಿಕೆರೆ, ಕಾರೇಹಳ್ಳಿ, ಮಾವಿನಕೆರೆ, ಕೆಂಚೇನಹಳ್ಳಿ, ದೊಡ್ಡೇರಿ, ಗಂಗೂರು, ದೇವರನರಸೀಪುರ, ಮಸರಹಳ್ಳಿ, ಅಂತರಗಂಗೆ, ಕಾಚಗೊಂಡನಹಳ್ಳಿ, ಬೊಮ್ಮೇನಹಳ್ಳಿ, ಬಸವನಗುಡಿ, ಕೆ.ಎಚ್.ನಗರ, ರತ್ನಾಪುರ, ಉಕ್ಕುಂದ, ಶಿವಪುರ, ಶ್ರೀನಿವಾಸಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
