ಶಿವಮೊಗ್ಗ: ಯೂಟ್ಯೂಬ್ನಲ್ಲಿ ಸಾಲ ನೀಡುವುದಾಗಿ ಬಂದ ಜಾಹೀರಾತು ನಂಬಿ ರೈತರೊಬ್ಬರು ಲಕ್ಷಾಂತರ ರುಪಾಯಿ ಹಣ ಕಳೆದುಕೊಂಡಿದ್ದಾರೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗ ಜಿಲ್ಲೆಯ ರೈತ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾಗ ಲೋನ್ ನೀಡುವ ವಿಡಿಯೋ ನೋಡಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದರು. ವಾಟ್ಸಾಪ್ ಮೂಲಕ ಸಂಪರ್ಕಿಸಿದ ವಂಚಕರು ಸಾಲ ನೀಡುವುದಾಗಿ ನಂಬಿಸಿದ್ದಾರೆ. ಬಳಿಕ ಪ್ರೊಸೆಸಿಂಗ್ ಫೀ, ಟ್ಯಾಕ್ಸ್ ಮತ್ತು ಸರ್ವೀಸ್ ಚಾರ್ಜ್ ಸೇರಿದಂತೆ ವಿವಿಧ ಕಾರಣ ನೀಡಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾರೆ.

ಜೂನ್ 2ರಿಂದ ಅಗಸ್ಟ್ 6ರವರೆಗೆ ಹಂತ ಹಂತವಾಗಿ ರೈತ ₹12,50,078 ಹಣವನ್ನು ವರ್ಗಾಯಸಿದ್ದಾರೆ. ಮೋಸ ಹೋಗಿರುವುದು ತಿಳಿದುಬಂದ ಬಳಿಕ ಶಿವಮೊಗ್ಗದ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.