ಶಿವಮೊಗ್ಗ ಲೈವ್
ಶಿವಮೊಗ್ಗ: ಜೆಸಿಬಿ ವಾಹನದಿಂದ ಸಿಮೆಂಟ್ ಚೇಂಬರ್ ಜಾರಿಬಿದ್ದು ವ್ಯಕ್ತಿಯೊಬ್ಬರ ಎಡಗಾಲಿನ ಮೂಳೆ ಮುರಿದಿದೆ.
ಮಾಚೇನಹಳ್ಳಿ ಗ್ರಾಮದ ಲಕ್ಕಮ್ಮ-ಲಕ್ಕಪ್ಪ ಲೇಔಟ್ ಮುಖ್ಯ ರಸ್ತೆಯಲ್ಲಿ ರವಿ.ಸಿ (58) ಎನ್ನುವರು ಎಂದಿನಂತೆ ಹಸುಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿ ಕಾಮಗಾರಿ ನಡೆಸುತ್ತಿದ್ದ ಜೆಸಿಬಿಯಿಂದ ಸಿಮೆಂಟ್ ಚೇಂಬರ್ ಕೆಳಗೆ ಬಿದ್ದಿದೆ. ರವಿ ಅವರ ಎಡಗಾಲಿನ ಮೇಲೆ ಬಿದ್ದಿದ್ದು, ಮೂಳೆ ಸಂಪೂರ್ಣ ಮುರಿದಿದೆ ಎಂದು ಆರೋಪಿಸಲಾಗಿದೆ. ಗಾಯಾಳುವನ್ನು ತಕ್ಷಣವೇ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಜೆಸಿಬಿ ಚಾಲಕನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
