ಕೆಂಚನಾಲ ಮಳೆಗಾಲದ ಮಾರಿ ಜಾತ್ರೆ, ಹೇಗಿತ್ತು ವೈಭವ?

ರಿಪ್ಪನ್‌ಪೇಟೆ: ವರ್ಷಕ್ಕೆ ಎರಡು ಬಾರಿ ಆಚರಿಸುವ ವಿಶೇಷ ಪರಂಪರೆ ಹೊಂದಿರುವ ಕೆಂಚನಾಲ ಶ್ರೀ ಮಾರಿಕಾಂಬಾ ದೇವಿಯ ಮಳೆಗಾಲದ ಜಾತ್ರೆಯು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಬೆಳಿಗ್ಗೆಯಿಂದಲೇ ಆರಂಭವಾದ ಧಾರ್ಮಿಕ ವಿಧಿವಿಧಾನಗಳಲ್ಲಿ ದೇವಿಗೆ ಬೆಳ್ಳಿಯ ಮುಖವಾಡ ಧರಿಸಿ, ವಿಶೇಷ ಪುಷ್ಪಾಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಹಣ್ಣುಕಾಯಿ ಅರ್ಪಿಸಿ ದರ್ಶನ ಪಡೆದರು. ದೇವಸ್ಥಾನದ ಮಾರ್ಗದ ಇಕ್ಕೆಲಗಳಲ್ಲಿ ವಿವಿಧ ಮಳಿಗೆಗಳಲ್ಲಿ ಹಾಕಲಾಗಿತ್ತು.

Kenchanala-Jathre-Malegalada-Jathre.

ಭಕ್ತರು ಖರೀದಿಯಲ್ಲಿ ತೊಡಗಿದ್ದರು. ದೇವಿಗೆ ಉಡಿತುಂಬುವುದು, ಮಳೆ-ಬೆಳೆ ಹಾಗೂ ಇಷ್ಟಾರ್ಥಗಳಿಗಾಗಿ ಹರಕೆ ತೀರಿಸುವುದು ಈ ಜಾತ್ರೆಯ ವಿಶೇಷತೆಯಾಗಿತ್ತು. ಧರ್ಮಭೇದವಿಲ್ಲದೆ ಸುತ್ತಮುತ್ತಲಿನ ಹತ್ತೂರುಗಳ ಸಾರ್ವಜನಿಕರು ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು.