ಸಚಿವರಿಗೆ ಖಾತೆ ಹಂಚಿಕೆ, ಮಧು ಬಂಗಾರಪ್ಪಗೆ ಯಾವ ಖಾತೆ ನೀಡಲಾಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರಾಜಕೀಯ ಸುದ್ದಿ: ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಕೋಟಾದಿಂದ ಸಚಿವರಾಗಿರುವ ಮಧು ಬಂಗಾರಪ್ಪ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಮುಂದುವರೆದಿದೆ. ಈ ಹಿಂದೆ ನಿರ್ವವಹಿಸಿದ್ದ ಖಾತೆಯನ್ನೇ ನೀಡಲಾಗಿದೆ.

ಯಾರಿಗೆಲ್ಲ ಯಾವ ಖಾತೆ ನೀಡಲಾಗಿದೆ?

  • ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ: ಹಣಕಾಸು, ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ, ಕೃಷಿ ಮಾರುಕಟ್ಟೆ, ಬಿಡಿಎ ಮತ್ತು ಬಿಎಂಆರ್‌ಡಿಎ ವ್ಯಾಪ್ತಿಗೆ ಬರುವ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಹಂಚಿಕೆಯಾಗದ ಖಾತೆಗಳು.
  • ಬಿ.ಜೆಡ್. ಜಮೀರ್ ಅಹ್ಮದ್ ಖಾನ್: ವಸತಿ ಇಲಾಖೆ
  • ರಾಮಲಿಂಗ ರೆಡ್ಡಿ: ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ
  • ಲಕ್ಷ್ಮಣ ಸವದಿ: ಕೃಷಿ ಮಾರುಕಟ್ಟೆ ಹೊರತುಪಡಿಸಿ ಸಹಕಾರ ಇಲಾಖೆ.
  • ರುದ್ರಪ್ಪ ಮಾನಪ್ಪ ಲಮಾಣಿ: ಸಕ್ಕರೆ ಮತ್ತು ಜವಳಿ ಇಲಾಖೆ.
  • ಕೆ.ಎಚ್. ಮುನಿಯಪ್ಪ: ಸಮಾಜ ಕಲ್ಯಾಣ ಇಲಾಖೆ.
  • ಶಿವರಾಜ್ ತಂಗಡಗಿ: ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ.
  • ಯು.ಟಿ. ಖಾದರ್: ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
  • ಟಿ. ರಘುಮೂರ್ತಿ: ಎಸ್‌ಟಿ ಕಲ್ಯಾಣ ಇಲಾಖೆ.
  • ಡಾ. ಅಜಯ್ ಸಿಂಗ್: ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ.
  • ಚಲುವರಾಯಸ್ವಾಮಿ: ಬೃಹತ್ ಮತ್ತು ಮಧ್ಯಮ ನೀರಾವರಿ.
  • ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ.
  • ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ.
  • ಶಿವಲಿಂಗೇಗೌಡ: ಹಣಕಾಸು ಇಲಾಖೆಯಿಂದ ಅಬಕಾರಿ.
  • ಪುಟ್ಟರಂಗ ಶೆಟ್ಟಿ: ಪಶುಸಂಗೋಪನೆ ಮತ್ತು ರೇಷ್ಮೆ.
  • ವಿಜಯಾನಂದ ಕಾಶಪ್ಪನವರ್: ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳು.
  • ಸಂತೋಷ್ ಲಾಡ್: ಕಾರ್ಮಿಕ ಇಲಾಖೆ.
  • ಕೆ.ಎಸ್. ಬಸವಂತಪ್ಪ: ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ.
  • ಎಸ್.ಎಸ್. ಮಲ್ಲಿಕಾರ್ಜುನ್: ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ.
  • ರಿಜ್ವಾನ್ ಹರ್ಷದ್: ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು.
  • ನರೇಂದ್ರ ಸ್ವಾಮಿ: ಕೃಷಿ ಇಲಾಖೆ.
  • ಎಚ್.ಸಿ. ಬಾಲಕೃಷ್ಣ: ಪೌರಾಡಳಿತ ಇಲಾಖೆ.
  • ಬಿ. ನಾಗೇಂದ್ರ: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ.