ಶಿವಮೊಗ್ಗ ಲೈವ್.ಕಾಂ | ಹೊಸನಗರ
ಹೊಸನಗರ ತಾಲೂಕಿನ ಕಣಿಕಿ ಬೇಳೂರು ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಅಳವಡಿಸಿದ್ದ ನೀರು ಪಂಪ್‌ಸೆಟ್ ಹಾಗೂ ತಾಮ್ರದ ತಂತಿಯನ್ನು ಕಳ್ಳರು ದೋಚಿದ್ದಾರೆ. ಬಿ.ಎನ್. ಭಾಸ್ಕರ ಎಂಬುವವರಿಗೆ ಸೇರಿದ ತೋಟದಲ್ಲಿ ಕೃತ್ಯ ನಡೆದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಆಗಸ್ಟ್ 10ರ ರಾತ್ರಿ ತೋಟದ ಬಳಿ ಹೊಳೆಗೆ ಅಳವಡಿಸಿದ್ದ 2 ಹೆಚ್.ಪಿ ಪಂಪ್‌ಸೆಟ್ ಬಳಸಿ ಮನೆ ಬಳಕೆಗೆ ನೀರು ತುಂಬಿಸಿಕೊಳ್ಳಲಾಗಿತ್ತು. ಮರುದಿನ ಬೆಳಿಗ್ಗೆ ತೋಟಕ್ಕೆ ತೆರಳಿ ಪಂಪ್‌ಸೆಟ್ ಆನ್ ಮಾಡಿದಾಗ ನೀರು ಬರಲಿಲ್ಲ. ಪರಿಶೀಲನೆ ಮಾಡಿದಾಗ ಹೊಳೆ ಬದಿಯಲ್ಲಿದ್ದ ಪಂಪ್‌ಸೆಟ್ ಹಾಗೂ ವಿದ್ಯುತ್ ಬೋರ್ಡ್‌ನಿಂದ ಪಂಪ್‌ಸೆಟ್‌ವರೆಗೆ ಹಾಕಿದ್ದ ಕಾಪರ್ ವೈರ್ ಕಳವಾಗಿರುವುದು ಬೆಳಕಿಗೆ ಬಂದಿದೆ.

₹15,000 ಮೌಲ್ಯದ ಪಂಪ್‌ಸೆಟ್ ಹಾಗೂ ₹15,000 ಮೌಲ್ಯದ 200 ಅಡಿ ಉದ್ದದ ಕಾಪರ್ ವೈರ್ ಸೇರಿ ಒಟ್ಟು ₹30,000 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.