ಶಿವಮೊಗ್ಗ ಲೈವ್.ಕಾಂ | ಸಾಗರ
ಸಾಗರ ತಾಲ್ಲೂಕಿನ ತುಮರಿ ಗ್ರಾಮದಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ, ಕಟ್ಟಡಕ್ಕೆ ಹಾನಿ ಮಾಡಿ, ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಆಗಸ್ಟ್ 17ರ ರಾತ್ರಿ ದುಷ್ಕರ್ಮಿಗಳು ರಂಗಮಂದಿರದ ಮುಖ್ಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ. ಅಲ್ಲಿದ್ದ ಕುರ್ಚಿಗಳನ್ನು ಒಡೆದು ಹಾಕಿ, ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ರಂಗಮಂದಿರದ ನವೀಕರಣಕ್ಕಾಗಿ ಸಂಗ್ರಹಿಸಿದ್ದ ಬಣ್ಣದ ಡಬ್ಬಗಳನ್ನು ಒಡೆದು ಅಲ್ಲಿಯೇ ಚೆಲ್ಲಿದ್ದಾರೆ.

ಬೆಂಕಿ ಹಚ್ಚಲು ಯತ್ನ
ರಂಗಮಂದಿರವನ್ನು ಸುಟ್ಟು ಹಾಕುವ ಉದ್ದೇಶದಿಂದ ದುಷ್ಕರ್ಮಿಗಳು ಹೊರಭಾಗದಿಂದ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇದಕ್ಕೆ ಬಳಸಲಾದ ಮರದ ತುಂಡುಗಳು, ಪ್ಲಾಸ್ಟಿಕ್ ಪೈಪ್ ಹಾಗೂ ಇತರೆ ದಹನಕಾರಿ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ. ಈ ಕೃತ್ಯದಿಂದ ₹1 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಭಿವ್ಯಕ್ತಿ ಬಳಗದ ಕಾರ್ಯದರ್ಶಿ ರಾಘವೇಂದ್ರ.ಎಂ ತಿಳಿಸಿದ್ದಾರೆ.
ಸುಮಾರು 40 ವರ್ಷದ ರಂಗಮಂದಿರಕ್ಕೆ ಇತ್ತೀಚೆಗೆ ಸರ್ಕಾರದಿಂದ ಅನುದಾನ ದೊರೆತು ನವೀಕರಣಗೊಳ್ಳುತಿತ್ತು. ಈ ವೇಳೆ ದುಷ್ಕರ್ಮಿಗಳು ದಾಳಿ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಡಿಪಿ ಸದಸ್ಯ ಸತ್ಯನಾರಾಯಣ ಜಿ.ಟಿ. ಹಾಗೂ ಅಭಿವ್ಯಕ್ತಿ ಬಳಗದ ಅಧ್ಯಕ್ಷ ಲೋಕಪಾಲ್ ಜೈನ್ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.