ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಜೆಸಿಐ ಶಿವಮೊಗ್ಗ ವಿವೇಕ್, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಮತ್ತು ಅತಿಥಿ ಕಲಾವಿದರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 23 ರಂದು ಸಂಜೆ 5 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ‘ಚೆಲುವೆ ಚಿತ್ರಾವತಿ’ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಸಿಐ ಶಿವಮೊಗ್ಗ ವಿವೇಕದ ಪ್ರಮುಖ ಉದಯ್ ಕಡಂಬ, ಸುಮಾರು 20 ವರ್ಷಗಳ ನಂತರ ಚೆಲುವೆ ಚಿತ್ರಾವತಿ ಯಕ್ಷಗಾನ ಪ್ರದರ್ಶನವನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗುತ್ತಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ದರ್ಶನ್ ಗೌಡ ಗೋಳಿಹೊಳೆ, ಅತಿಥಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆ ವಾದಕರಾಗಿ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ ಮತ್ತು ಚೆಂಡೆ ವಾದಕರಾಗಿ ಪ್ರಜ್ವಲ್ ಮುಂಡಾಡಿ ಭಾಗವಹಿಸಲಿದ್ದಾರೆ ಎಂದರು.

ಮುಮ್ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆ, ವಿಶ್ವನಾಥ್ ಆಚಾರ್ಯ ತೊಂಬೊಟ್ಟು, ಉದಯ ಹೆಗಡೆ ಕಡಬಾಳ, ಕೆ.ಜಿ. ಕಾರ್ತಿಕ್, ಭಾಸ್ಕರ್ ಮರಾಠೆ ಮತ್ತು ದತ್ತು ಮರಾಠೆ ಪಾತ್ರ ನಿರ್ವಹಿಸಲಿದ್ದಾರೆ. ಅತಿಥಿ ಕಲಾವಿದರಾಗಿ ಕಾರ್ತಿಕ್ ಚಿಟ್ಟಾಣಿ ಕಣ್ಮನ ಸೆಳೆಯಲಿದ್ದಾರೆ. ಸ್ತ್ರೀ ಭೂಮಿಕೆಯಲ್ಲಿ ಸುಧೀರ್ ಉಪ್ಪೂರು, ಸಂತೋಷ್ ಹೆಂಗವಳ್ಳಿ, ಪುರುಷೋತ್ತಮ್ ಸಾಗರ್ ಹಾಗೂ ಹಾಸ್ಯ ಪಾತ್ರದಲ್ಲಿ ಶೇಖರ್ ಶೆಟ್ಟಿ ಯಳಬೇರು ಮತ್ತು ಪುರಂದರ ಮೂಡ್ಕಣಿ ಅಭಿನಯಿಸಲಿದ್ದಾರೆ ಎಂದು ತಿಳಿಸಿದರು.
ಜೆಸಿಐ ವಿವೇಕ ಅಧ್ಯಕ್ಷೆ ವಿಜಯಲಕ್ಷ್ಮಿ ಕಡಂಬ ಮಾತನಾಡಿ, ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಆದರೆ ದಾನಿಗಳಿಗೆ ವಿಶೇಷ ಪ್ರವೇಶ ಪಾಸ್‌ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಟನ್ ಜಗದೀಶ್, ಡಾ.ಪರಿಸರ ನಾಗರಾಜ್, ಬದ್ರೀಶ್, ಭಾರತಿ, ಶ್ರೀನಿವಾಸ ಆಚಾರ್ಯ, ಜಯಕುಮಾರ್, ಶ್ಯಾಮಲಾ, ಬಾಲರಾಜ್ ಇದ್ದರು.