ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ
ಶಿಕಾರಿಪುರ ತಾಲೂಕಿನ ತರಲಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪ್ಲಾಂಟೇಷನ್ ವಾಚರ್ ಕೆ.ಎನ್. ರಾಮು ಅವರ ಮೇಲೆ ಕರಡಿಯೊಂದು ದಾಳಿ ನಡೆಸಿ ಗಾಯಗೊಳಿಸಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಬುಧವಾರ ರಾತ್ರಿ ಶಿಡಿಗಿನಾಳು ಗ್ರಾಮದಲ್ಲಿ ರಾಮು ಅವರು ಗಸ್ತು ತಿರುಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡ ವಾಚರ್ ಅವರನ್ನು ಸ್ಥಳೀಯರು ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಸಾಗರ ವಿಭಾಗದ ಡಿಎಫ್‌ಒ ಮಹಮ್ಮದ್ ಫಯಾಜ್ವುದ್ದೀನ್,

ಶಿಕಾರಿಪುರ ವಲಯದ ಎಸಿಎಫ್ ರವೀಂದ್ರ ನಾಯ್ಕ್ ಹಾಗೂ ವಲಯ ಅರಣ್ಯಾಧಿಕಾರಿ ಪರಶುರಾಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರಾಮು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಇದನ್ನೂ ಓದಿ:➤ ಶಿಕಾರಿಪುರ ಬಂದ್, ಮುಖ್ಯ ಭಾಷಣಕಾರ ಶರಣ್ ಪಂಪ್ವೆಲ್ಗೆ ನೊಟೀಸ್ ನೀಡಿ ಜಿಲ್ಲೆಯ ಗಡಿದಾಟಿಸಿದ ಪೊಲೀಸ್