ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಬೈಕ್ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಮೇಲೆ ಮುಸಿಯಾ ದಾಳಿ ನಡೆಸಿ ಗಾಯಗೊಳಿಸಿದೆ. ಕಾಶಿಪುರ ಗೇಟ್ ಬಳಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಮುಸಿಯ ದಾಳಿಗೆ ಕುಮಾರ್ ನಾಯ್ಕ್ ಎಂಬುವವರ ಕೈಗೆ ಗಂಭೀರ ಗಾಯವಾಗಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಮುಸಿಯಾ ದಾಳಿಯ 5 ಸೆಕೆಂಡ್ನ ವಿಡಿಯೋ ವೈರಲ್ ಆಗಿದೆ. ಕುಮಾರ್ ನಾಯ್ಕ್ ಬೈಕ್ ಮೇಲೆ ಕುಳಿತಿದ್ದು, ಹೆಡ್ಲೈನ್ ಡೂಮ್ ಮೇಲೆ ಮುಸಿಯಾ ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕುಮಾರ್ ನಾಯ್ಕ್ ಬಲಗೈನಿಂದ ಬೈಕ್ನ ಬೀಗಕ್ಕೆ ಕೈ ಹಾಕುತ್ತಾರೆ. ಆಗ ಮುಸಿಯಾ ಏಕಾಏಕಿ ದಾಳಿ ನಡೆಸಿ ಬಲಗೈಗೆ ಕಚ್ಚಿದೆ. ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ ನಾಯ್ಕ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ:➤ ಗಾಂಧಿ ಪಾರ್ಕ್ಗೆ ಶಿವಮೊಗ್ಗ MLA ಭೇಟಿ, ಅರ್ಧಕ್ಕೆ ನಿಂತ ಕಾಮಗಾರಿ ಕಂಡು ಗರಂ, ಅಧಿಕಾರಿಗಳಿಗೆ ಏನೆಲ್ಲ ಸೂಚಿಸಿದರು?