ಶಿವಮೊಗ್ಗ ಲೈವ್
ಶಿವಮೊಗ್ಗ: ವೈರಿಂಗ್ ಕೆಲಸಕ್ಕಾಗಿ ಗ್ಯಾರೇಜ್ ಬಳಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳುವಾಗಿದೆ. ಮೆಹದಿ ನಗರ ಮೊದಲನೇ ಕ್ರಾಸ್ ಮಸೀದಿ ರಸ್ತೆಯಲ್ಲಿ ಘಟನೆ ನಡೆದಿದೆ.
ಗೋಪಾಳ ನಿವಾಸಿ ಪ್ರದೀಪ್ ಎಸ್.ಹಳಬಾವಿ ಎಂಬುವವರಿಗೆ ಸೇರಿದ ಮಾರುತಿ 800 ಕಾರು ಕಳ್ಳತನವಾಗಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಕಾರ್ ಡೆಕೋರ್ ಅಂಗಡಿಗೆ ವೈಯರಿಂಗ್ ಕೆಲಸಕ್ಕಾಗಿ ಕಾರನ್ನು ಬಿಟ್ಟಿದ್ದರು. ಕೆಲಸ ಪೂರ್ಣಗೊಳ್ಳದ ಹಿನ್ನೆಲೆ ಅಂದು ರಾತ್ರಿ ಕಾರನ್ನು ಮೆಹದಿ ನಗರದಲ್ಲಿ ನಿಲ್ಲಿಸಿ ಡೋರ್ ಲಾಕ್ ಮಾಡಿ ತೆರಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ತಾಯಿ, ಮಕ್ಕಳು ತುಂಗಾ ನದಿಗೆ ಜಿಗಿದ ಕೇಸ್ಗೆ ಟ್ವಿಸ್ಟ್, ಏನದು?
ಮರುದಿನ ಬೆಳಿಗ್ಗೆ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಕಾರು ಇರಲಿಲ್ಲ ಎಂದು ಆರೋಪಿಸಲಾಗಿದೆ. ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ತಾಯಿ, ಮಕ್ಕಳು ತುಂಗಾ ನದಿಗೆ ಜಿಗಿದ ಕೇಸ್ಗೆ ಟ್ವಿಸ್ಟ್, ಏನದು?