SHIMOGA CRIME | ಏಳು ವರ್ಷ ಕೋರ್ಟ್’ಗೆ ಬಾರದ ಸರಗಳ್ಳನ್ನು ಹಿಡಿದ ವಿನೋಬನಗರ ಪೊಲೀಸ್, ಈತ ಸಿಕ್ಕಿದ್ದು ಹೇಗೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019

ಏಳು ವರ್ಷದಿಂದ ಪ್ರಕರಣದ ವಿಚಾರಣೆಗೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಸರಗಳ್ಳನನ್ನು ವಿನೋಬನಗರ ಠಾಣೆ ಪೊಲೀಸರು ಹಿಡಿದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

2012ರಲ್ಲಿ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಮಾಲತೇಶ ನಾಯ್ಕ (37) ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ವಿನೋಬನಗರ ಠಾಣೆ ಪೊಲೀಸರು ಟೀಂ ರಚನೆ ಮಾಡಿದ್ದರು.

ಸರಗಳ್ಳ ಸಿಕ್ಕಿಬಿದ್ದಿದ್ದು ಹೇಗೆ?

78320319 982905075404246 1901676995998121984 n.jpg? nc cat=100& nc ohc=GbHMTlcb3XoAQkz8Fa0XZy7DgSeKq WYYCwmPvR7kAw6azcs4tWJD9bqg& nc ht=scontent.fblr11 1

ಏಳು ವರ್ಷದಿಂದ ತಲೆಮರೆಸಿಕೊಂಡಿದ್ದ ಮಾಲತೇಶ, ಇತ್ತೀಚೆಗೆ ತನ್ನ ಮನೆಗೆ ಬರುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ್ ಮತ್ತು ಅವಿನಾಶ್ ಅವರನ್ನು ಹೊಳಲ್ಕೆರೆಯಲ್ಲಿರುವ ಮಾಲತೇಶನ ಮನೆ ಬಳಿ ನಿಯೋಜಿಸಲಾಗಿತ್ತು. ಮಾಲತೇಶ ಮನೆಗೆ ಬರುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Shimoga Vinobhanagara Police arrest a chain snatcher after seven years. The chain snatcher was caught in holalkere by the police. He never attended the court hearing in seven years.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment