ಶಿವಮೊಗ್ಗ ಸಿಟಿಯಲ್ಲಿ ಆತಂಕ ಮೂಡಿಸಿದ್ದ ಮುಸಿಯಾ ಕೊನೆಗೂ ಸೆರೆ, ಹೇಗಿತ್ತು ಕಾರ್ಯಾಚರಣೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ನಗರದ ವಿವಿಧೆಡೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಮುಸಿಯ ಕೊನೆಗೂ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದೆ.

ಕಾಶಿಪುರದಲ್ಲಿ ಯುವಕನ ಮೇಲೆ ದಾಳಿ ನಡೆಸಿದ್ದ ಈ ಮುಸಿಯ, ಹರಕೆರೆ ಸಮೀಪ ಗಣೇಶ್ ಎಂಬುವವರ ಮೇಲೂ ದಾಳಿ ಮಾಡಿತ್ತು. ಘಟನೆಯಿಂದ ಹರಕೆರೆ ಹಾಗೂ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿತ್ತು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ವಿಷಯ ತಿಳಿದು ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ವಲಯ ಅರಣ್ಯಾಧಿಕಾರಿ ವಿಜಯಕುಮಾರ್.ಜೆ, ಉಪ ವಲಯ ಅರಣ್ಯಾಧಿಕಾರಿ ಪ್ರಮೋದ.ಕೆ ನೇತೃತ್ವದಲ್ಲಿ, ಪಶುವೈದ್ಯಾಧಿಕಾರಿ ಮುರಳಿ, ಸ್ನೇಕ್ ವಿಕ್ಕಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಮುಸಿಯನನ್ನು ಸೆರೆ ಹಿಡಿದಿದ್ದಾರೆ. ಮುಸಿಯ ಸೆರೆ ಸಿಕ್ಕಿದ್ದರಿಂದ ಕಾಶಿಪುರ ಹಾಗೂ ಹರಕೆರೆ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮುಸಿಯಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.

langur-create-panic-among-residents-in-Shivamogga