ಈದ್‌ ಮೆರವಣಿಗೆಯಲ್ಲಿ ಡಿ.ಜೆ, ದಾಖಲಾಯ್ತು ಮತ್ತಷ್ಟು ಕೇಸ್‌, ಎಲ್ಲೆಲ್ಲಿ? ಎಷ್ಟು ಪ್ರಕರಣ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಸಿಟಿಯಲ್ಲಿ ಈದ್‌ ಮೆರವಣಿಗೆ ವೇಳೆ ಡಿಜೆ ಸಿಸ್ಟಮ್‌ ಬಳಕೆ ಮಾಡಿದ್ದಕ್ಕಾಗಿ ಮತ್ತಷ್ಟು ಪ್ರಕರಣ ದಾಖಲಾಗಿವೆ. ಈಗಾಗಲೇ ಕೋಟೆ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಈಗ ತುಂಗಾ ನಗರ ಮತ್ತು ವಿನೋಬನಗರ ಠಾಣೆಲ್ಲಿ ಮತ್ತೆ ಮೂರು ಕೇಸ್‌ ದಾಖಲಾಗಿವೆ. ಇದರಿಂದ ಡಿಜೆ ಸಿಸ್ಟಮ್‌ ಬಳೆ ಮಾಡಿದ್ದಕ್ಕೆ ದಾಖಲಾದ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿವೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

Vinobanagara-Police-Station-Shimoga

ಇಲ್ಲಿದೆ ಕೇಸ್‌ ಡಿಟೇಲ್ಸ್‌

ಕೇಸ್ 1: ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೇಬೈಲಿನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿ ಟ್ರ್ಯಾಕ್ಟರ್‌ನಲ್ಲಿ ಡಿ.ಜೆ ಬಾಕ್ಸ್ ಹಾಗೂ ಲೇಸರ್ ಲೈಟ್ ಬಳಸಿ ಶಬ್ದ ಮಾಲಿನ್ಯ ಉಂಟುಮಾಡಿದ ಆರೋಪದ ಮೇರೆಗೆ ಡಿ.ಜೆ ಮಾಲೀಕ ಹಾಗೂ ಟ್ಯಾಕ್ಟರ್ ಚಾಲಕ ಮತ್ತು ಸ್ಥಳೀಯ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕೇಸ್ 2: ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗಂಗೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಅನುಮತಿ ಇಲ್ಲದೆ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಡಿ.ಜೆ ಸೌಂಡ್ಸ್ ಬಾಕ್ಸ್ ಅಳವಡಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಈ ಸಂಬಂಧ ಆಯೋಜಕರು ಮತ್ತು ಡಿ.ಜೆ. ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೇಸ್ 3: ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಕೊನೆ ಬಸ್ ನಿಲ್ದಾಣದ ಬಳಿ ಈದ್ ಮಿಲಾದ್ ಮೆರವಣಿಗೆ ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಡಿ.ಜೆ ಸೌಂಡ್ಸ್ ಬಾಕ್ಸ್ ಅಳವಡಿಸಲಾಗಿತ್ತು.  ನಿಯಮ ಉಲ್ಲಂಘಿಸಿದ ಹಿನ್ನೆಲೆ ಆಯೋಜಕರು, ಸೌಂಡ್ಸ್ ಬಾಕ್ಸ್ ಮತ್ತು ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.