ಶಿವಮೊಗ್ಗ ಲೈವ್
ಶಿವಮೊಗ್ಗ: ಹಣ ಹೂಡಿಕೆ ಮಾಡಿ ಪುಸ್ತಕಗಳನ್ನು ಓದಿ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.
ಸಂಬಂಧಿಯೊಬ್ಬರು ಶಿವಮೊಗ್ಗದ ಮಹಿಳೆಗೆ ಈ ಕುರಿತು ಮಾಹಿತಿ ನೀಡಿದ್ದರು. ಫ್ಯೂಚರ್ ಬುಕ್ ಸೀ ಟೆಕ್ನಾಲಜಿ ಲಿಮಿಟೆಡ್ ಕಂಪನಿಯ ಎಫ್ಬಿಟಿ ಎಂಬ ಆ್ಯಪ್ ಮೂಲಕ ಹೂಡಿಕೆ ಮಾಡಿ, ಪುಸ್ತಕ ಓದಿದರೆ ಲಾಭ ಗಳಿಸಬಹುದು ಎಂದು ತಿಳಿಸಿದ್ದರು. ಅಲ್ಲದೆ ಲಿಂಕ್ ಕಳುಹಿಸಿದ್ದರು. ಇದನ್ನು ನಂಬಿದ ಶಿವಮೊಗ್ಗದ ಮಹಿಳೆ ಯುಪಿಐ ಐಡಿಗಳಿಗೆ ಹಂತ ಹಂತವಾಗಿ ಒಟ್ಟು ₹3,33,150 ಹಣ ವರ್ಗಾವಣೆ ಮಾಡಿದ್ದರು.

ಆರಂಭದಲ್ಲಿ ಲಾಭ ಎಂಬಂತೆ ಸ್ವಲ್ಪ ಹಣ ಮಹಿಳೆಗೆ ವರ್ಗಾವಣೆಯಾಗಿ ಬಂದಿತ್ತು. ನಂತರ ಹಣ ವಾಪಸ್ ನೀಡದೆ ವಂಚಿಸಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.