ಶಿವಮೊಗ್ಗ ಲೈವ್
ಶಿವಮೊಗ್ಗ: ಬಚ್ಚಲು ನೀರು, ಮನೆಯಲ್ಲಿ ಬಳಸಿದ ನೀರನ್ನು ಖಾಲಿ ಜಾಗದಲ್ಲಿ ಬಿಡುವ ವಿಚಾರವಾಗಿ ಅಕ್ಕಪಕ್ಕದ ಮನೆಯವರ ಮಧ್ಯೆ ನಡೆದ ಗಲಾಟೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಶಿವಮೊಗ್ಗ ತಾಲ್ಲೂಕು ಕಡೇಕಲ್ ಗ್ರಾಮದ ಅಂಬೇಡ್ಕರ್ ಬೀದಿಯಲ್ಲಿ ಘಟನೆ ನಡೆದಿದೆ.
ಮಂಜುನಾಥ ಮತ್ತು ರಾಜು ಎಂಬುವರ ನಡುವೆ ಮಧ್ಯೆ ಗಲಾಟೆಯಾಗಿದೆ. ರಾಜು ಅವರು ತಮ್ಮ ಮನೆಯ ಬಳಸಿದ ನೀರನ್ನು ಮಂಜುನಾಥ ಅವರಿಗೆ ಸೇರಿದ ಜಾಗಕ್ಕೆ ಬಿಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದೇ ವಿಚಾರವಾಗಿ ಇಬ್ಬರಿಗೆ ಮಾತಿಗೆ ಮಾತು ಬೆಳೆದು ಪರಸ್ಪರರ ಮೇಲೆ ಹಲ್ಲೆ ನಡೆದಿದೆ. ಘಟನೆ ಸಂಬಂಧ ಮಂಜುನಾಥ್ ಮತ್ತು ರಾಜು ದೂರು, ಪ್ರತಿದೂರು ದಾಖಲಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
