ಶಿವಮೊಗ್ಗ ಸೆಂಟ್ರಲ್‌ ಜೈಲ್‌ನಲ್ಲಿ ಪೊಲೀಸರಿಂದ ದಿಢೀರ್‌ ಪರಿಶೀಲನೆ, ಏನೆಲ್ಲ ತಪಾಸಣೆ ಮಾಡಿದರು?

ಶಿವಮೊಗ್ಗ: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃದಹಲ್ಲಿ ಶಿವಮಗ್ಗ ಪೊಲೀಸರು ದಿಢೀರ್‌ ಪರಿಶೀಲನೆ ನಡೆಸಿದರು. ಹೆಚ್ಚವರಿ ಪೊಲೀಸ್‌ ಅಧೀಕ್ಷಕ ಎ.ಜಿ.ಕಾರಿಯಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿ ಕಾರಾಗೃಹಕ್ಕೆ ಭೇಟಿ ನೀಡಿ, ಕಾರಾಗೃಹದ ಸುರಕ್ಷತೆ, ಕೈದಿಗಳ ಬ್ಯಾರಕ್, ಕಾರಾಗೃಹದ ವ್ಯವಸ್ಥೆ ಪರಿಶೀಲನೆ ನಡೆಸಲಾಯಿತು ಎಂದು ಜಿಲ್ಲಾ ಪೊಲೀಸ್‌ ಇಲಾಖೆ ತಿಳಿಸಿದೆ. ಕೈದಿಗಳ ಬ್ಯಾರಕ್‌ನ ಪ್ರತಿ ಸೆಲ್‌ನಲ್ಲಿಯು ಪೊಲೀಸರು ಪರಿಶೀಲಿಸಿದರು.

Shivamogga-Police-Sudden-inspection-at-Central-Jail-at-Sogane

ಜೈಲು ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ್‌, ಬಂಧಿಖಾನೆ ಸಿಬ್ಬಂದಿ, ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಈ ಸಂದರ್ಭ ಇದ್ದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ