ಶಿವಮೊಗ್ಗ ಲೈವ್
ಸಾಗರ: ಮನೆಯೊಂದರ ಬಾಗಿಲಿನ ಲಾಕ್ ಮುರಿದು ₹2,25,000 ಮೌಲ್ಯದ ನಗದು, ಚಿನ್ನ, ಬೆಳ್ಳಿಯ ಆಭರಣ ಕಳವು ಮಾಡಲಾಗಿದೆ. ಸಾಗರ ತಾಲ್ಲೂಕು ಹಲಸಿನಘಟ್ಟ ಹುಳೆಗಾರು ಗ್ರಾಮದ ವೆಂಕಟರಮಣ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ.
ವೆಂಕಟರಮಣ ಮತ್ತು ಜಾನಕಮ್ಮ ದಂಪತಿ ಮನೆಯ ಬಾಗಿಲಿಗೆ ಬೀಗ ಹಾಕಿ ಜಮೀನಿಗೆ ಹೋಗಿದ್ದರು. ಈ ವೇಳೆ ಕೃತ್ಯ ನಡೆದಿದೆ. ಸಂಜೆ ವಾಪಸ್ ಬಂದು ನೋಡಿದಾಗ ಮನೆಯ ಗೇಟ್ ತೆರೆದಿತ್ತು. ಮನೆಯ ಬಾಗಿಲಿನ ಬೀಗ ಮುರಿಯಲಾಗಿತ್ತು.

ಏನೇನೆಲ್ಲ ಕಳ್ಳತನವಾಗಿದೆ?
ಬೀರುವಿನಲ್ಲಿದ್ದ ₹70,000 ನಗದು, ಉಂಗುರಗಳು, ಚೈನ್, ಕಿವಿಯೋಲೆ ಹಾಗೂ ಜುಮುಕಿ ಸೇರಿ ಸುಮಾರು ₹1,50,000 ಮೌಲ್ಯದ ವಿವಿಧ ಬಂಗಾರದ ಆಭರಣಗಳು ಮತ್ತು ₹5,000 ಮೌಲ್ಯದ ಬೆಳ್ಳಿಯ ಆಭರಣಗಳು ಕಳ್ಳತನವಾಗಿವೆ. ಇವುಗಳ ಒಟ್ಟು ಮೌಲ್ಯ ₹2,25,000 ಎಂದು ಅಂದಾಜಿಸಲಾಗಿದೆ.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.