ನಿರ್ಮಾಣ ಹಂತದ ಮನೆ ಬಳಿ ಬೆಳಿಗ್ಗೆ ಬಂದ ಮಾಲೀಕನಿಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿಕಾರಿಪುರ: ನಿರ್ಮಾಣ ಹಂತದ ಮನೆಯಲ್ಲಿ ಅಳವಡಿಸಿದ್ದ ವಿದ್ಯುತ್ ವೈಯರ್‌ಗಳು ಕಳ್ಳತನವಾಗಿದೆ. ಶಿಕಾರಿಪುರ ಪಟ್ಟಣದ ಕೆಹೆಚ್‌ಬಿ ಲೇಔಟ್ ಸಿ ಬ್ಲಾಕ್‌ನಲ್ಲಿ ಘಟನೆ ನಡೆದಿದೆ.

ಗಂಗಾಧರ್ ಎಂಬುವವರು ಎರಡು ಅಂತಸ್ತಿನ ಮನೆ ನಿರ್ಮಿಸುತ್ತಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಹ್ಯಾವೆಲ್ಸ್ ಕಂಪನಿಯ ವೈಯರ್ ಅನ್ನು ಎಳೆಯಲಾಗಿತ್ತು. ಆಗಸ್ಟ್‌ 30ರಂದು ಮನೆ ನಿರ್ಮಾಣದ ಕೆಲಸ ಮುಗಿಸಿ ಬಾಗಿಲಿಗೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಮನೆಯಲ್ಲಿದ್ದ ವೈಯರ್ ಕಟ್‌ ಆಗಿರುವುದು ಗೊತ್ತಾಗಿದೆ.

Shikaripura-Town-Police-Station

ಪರಿಶೀಲಿಸಿದಾಗ ವೈಯರ್ ಕಳ್ಳತನವಾಗಿರುವುದು ಗೊತ್ತಾಗಿದೆ. ಹ್ಯಾವೆಲ್ಸ್ ಕಂಪನಿಯ ₹1,40,000 ಮೌಲ್ಯದ ವೈಯರ್‌ ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.