ಹೊಳೆಹೊನ್ನೂರು: ಆನವೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ಇಟ್ಟಿಗೆಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉಗ್ರಾಣ ಮತ್ತು ಪಡಿತರ ವಿಭಾಗ ಕಟ್ಟಡವನ್ನು ಉದ್ಘಾಟಿಸಲಾಯಿತು. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕಾರ್ಯಕ್ರಮದಲ್ಲಿ ಎಸ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ. ಹನುಮಂತು ಮಾತನಾಡಿ, ರೈತರ ಬೆಳೆಗಳನ್ನು ದಾಸ್ತಾನು ಮಾಡಲು ಸುಸಜ್ಜಿತ ಉಗ್ರಾಣದ ಅವಶ್ಯಕತೆ ಇರುವುದನ್ನು ಮನಗಂಡು ಪ್ರತಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಉಗ್ರಾಣ ಕಟ್ಟಡ ನಿರ್ಮಿಸಲಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರೈತರ ಏಳಿಗೆಗಾಗಿ ತೆರೆಯಲಾಗಿದ್ದು, ಸ್ಥಳೀಯ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರು ಸದಸ್ಯತ್ವ ಪಡೆದು ಸಕ್ರಿಯವಾಗಿ ಭಾಗವಹಿಸಿ ಸಂಘದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ರ್ಯಾಮ್ಕೋ ನಿರ್ದೇಶಕ ಬಿ.ಜಿ. ಜಗದೀಶಗೌಡ, ಮ್ಯಾಮ್ಕೋಸ್ ನಿರ್ದೇಶಕ ಎಂ. ಕುಬೇಂದ್ರಪ್ಪ ಹಾಗೂ ಸಂಘದ ಉಪಾಧ್ಯಕ್ಷ ಟಿ. ಚಂದ್ರಪ್ಪ ಮಾತನಾಡಿದರು.
ಆನವೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಹಾಲೇಶ್ ಉದ್ಘಾಟನೆ ನೆರವೇರಿಸಿದರು. ಸಂಘದ ನಿರ್ದೇಶಕರಾದ ಎ.ಜಿ. ರಮೇಶ್ ಗೌಡ, ಪಿ. ಈಶ್ವರಪ್ಪ, ಹೆಚ್.ಜಿ. ಮಲ್ಲಯ್ಯ, ಎಂ.ಜಿ. ನಾಗರಾಜ, ಬಿ.ಟಿ. ಹನುಮಂತಪ್ಪ, ಎ.ಜಿ. ರಮೇಶ್, ಸಿ.ಜಿ. ಚಂದ್ರಶೇಖರ ಪಟೇಲ್, ಇ.ಎಂ. ರಾಜು, ಸುಶೀಲಮ್ಮ, ಹೆಚ್.ಡಿ. ವಿನೋದ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಿ.ಇ. ಹಾಲಸ್ವಾಮಿ ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.