ನರ್ಸಿಂಗ್‌ ವೃತ್ತಿ ಕೌಶಲ್ಯ ತರಬೇತಿ ಕೋರ್ಸ್‌ಗೆ ದಾಖಲಾತಿ, ಪ್ರತಿ ತಿಂಗಳು ಸ್ಟೈಫಂಡ್‌, ಉಚಿತ ಊಟ, ವಸತಿ

ಶಿವಮೊಗ್ಗ: ಮಾನಸ ಟ್ರಸ್ಟ್‌ನ ಮಾನಸ ವೃತ್ತಿ ತರಬೇತಿ ಕೇಂದ್ರದ ವತಿಯಿಂದ ಎರಡು ವರ್ಷಗಳ ಪೇಷಂಟ್ ಕೇರಿಂಗ್ ಹಾಗೂ ನರ್ಸಿಂಗ್ ವೃತ್ತಿ ಕೌಶಲ್ಯ ತರಬೇತಿ ಕೋರ್ಸ್‌ಗೆ ದಾಖಲಾತಿ ನಡೆಯುತ್ತಿದೆ.

ರಾಷ್ಟ್ರೀಯ ವೃತ್ತಿ ತರಬೇತಿ ಪರಿಷತ್ (NCVT) ಮಾನ್ಯತೆ ಹೊಂದಿರುವ ನರ್ಸಿಂಗ್ ಅಸಿಸ್ಟೆಂಟ್ ತರಬೇತಿಗೆ 10ನೇ ತರಗತಿ ಉತ್ತೀರ್ಣರು ಹಾಗೂ ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗುವುದು.

Kateel-Ashok-Pai-Nursing-College

ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ₹900 ಸ್ಟೈಫಂಡ್, ಉಚಿತ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಎರಡು ವರ್ಷಗಳ ತರಬೇತಿ ಪೂರ್ಣಗೊಂಡ ಬಳಿಕ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳು ಕೋರ್ಸ್‌ಗೆ ಸೇರಲು ಇನ್ನೂ 15 ದಿನಗಳ ಕಾಲಾವಕಾಶವಿದೆ ಎಂದು ಮಾನಸ ನರ್ಸಿಂಗ್ ಹೋಮ್‌ನ ಮುಖ್ಯಸ್ಥೆ ಡಾ. ಪ್ರೀತಿ ಶಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಮಾನಸ ನರ್ಸಿಂಗ್ ಹೋಮ್ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 94482 88489 ಸಂಪರ್ಕಿಸಬಹುದು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ