ಹಾರನಹಳ್ಳಿಯಲ್ಲಿ ಪ್ರಜಾಸೇವೆ ಸಭೆ, ಎಂಎಲ್ಎ ಏನೆಲ್ಲ ಹೇಳಿದರು? ಜನರ ಅಹವಾಲುಗಳೇನು?
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ಹಾರನಹಳ್ಳಿಯಲ್ಲಿ ಪ್ರಜಾಸೇವಾ ಆಂದೋಲನ ಸಭೆ ನಡೆಸಲಾಯಿತು. ಶಾಸಕಿ ಶಾರದಾ ಪೂರ್ಯಾನಾಯ್ಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಏನೇನಾಯ್ತು? ಎಂಎಲ್ಎ ಏನಂದ್ರು?

ಸಭೆಯಲ್ಲಿ ಮಾತನಾಡಿದ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜನರನ್ನು ಅಲೆದಾಡಿಸದೆ, ತಾಳ್ಮೆಯಿಂದ ಕೆಲಸ ಮಾಡಿಕೊಟ್ಟು ತೃಪ್ತಿದಾಯಕ ಸೇವೆ ನೀಡಬೇಕು. ಅಧಿಕಾರಿಗಳು ದರ್ಪ ತೋರದೆ ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಒದಗಿಸಬೇಕು.

ಹಾರನಹಳ್ಳಿ ಸುತ್ತಮುತ್ತ ಕಡಿಮೆ ಮಳೆಯಾಗಿದೆ. ಕೆರೆ, ಕಟ್ಟೆಗಳಲ್ಲಿ ನೀರಿಲ್ಲದಾಗಿದೆ. ಮುಂದೆ ಕುಡಿಯುವ ನೀರು ಹಾಗೂ ಜಾನುವಾರುಗಳ ಸಾಕುವುದು ಕಷ್ಟವಾಗಲಿದೆ. ಗಂಭೀರತೆ ಅರಿತು ನೀರಾವರಿ ಇಲಾಖೆ ಅಧಿಕಾರಿಗಳು ಏತ ನೀರಾವರಿ ಯೋಜನೆಗಳ ಮೂಲಕ ತ್ವರಿತವಾಗಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು.

ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಮಳೆಮಾಪನ ಕೇಂದ್ರಗಳ ವರದಿಯನ್ನು ಮಾತ್ರ ಅಂತಿಮವಾಗಿ ಪರಿಗಣಿಸಬಾರದು.
ಸಭೆಯಲ್ಲಿ ಶುದ್ಧ ಕುಡಿಯುವ ನೀರು, ಮಾಸಾಶನ, ಶಾಲೆಗೆ ಅಡುಗೆ ಕೋಣೆ, ರೈಲ್ವೆ ನಿಲ್ದಾಣದ ಬೆಳಕಿನ ವ್ಯವಸ್ಥೆ ಹಾಗೂ ಸ್ಮಶಾನ ಭೂಮಿ ಮಂಜೂರಾತಿ ಕುರಿತು ಸಾರ್ವಜನಿಕರಿಂದ ಅಹವಾಲುಗಳು ಸಲ್ಲಿಕೆಯಾದವು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಉಪವಿಭಾಗಾಧಿಕಾರಿ ಡಾ. ಮೈತ್ರಿ ಹಾಗೂ ತಹಸೀಲ್ದಾರ್ ರಾಜೀವ್ ಉಪಸ್ಥಿತರಿದ್ದರು.
