ವಿಘ್ನ ನಿವಾರಕನ ಸ್ವಾಗತಕ್ಕೆ ಶಿವಮೊಗ್ಗ ರೆಡಿ, ಹೇಗಿದೆ ಸಿದ್ಧತೆ?

ಶಿವಮೊಗ್ಗ: ಜಿಲ್ಲೆಯಲ್ಲಿ ವಿಘ್ನನಿವಾರಕನ ಸ್ವಾಗತಕ್ಕೆ ಸಿದ್ಧತೆ ಜೋರಾಗಿದೆ. ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಮಾರಾಟಕ್ಕಿದ್ದ ಗಣೇಶ ಮೂರ್ತಿಗಳನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.

ಮನೆಯಲ್ಲಿ ಪೂಜಿಸಲು ಸಾರ್ವಜನಿಕರು ಸಣ್ಣ ಮೂರ್ತಿಗಳನ್ನು ಖರೀದಿಸಿದರೆ, ಯುವಕ ಮಂಡಳಿಗಳು ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಲು ದೊಡ್ಡ ಗಾತ್ರದ ಮೂರ್ತಿಗಳನ್ನು ವಾಹನಗಳಲ್ಲಿ ಸಾಗಿಸಿದರು.

Ganesh-Idols-at-Science-Field-in-Shivamogga

ವಿವಿಧ ಭಂಗಿಯ ಗಣಪತಿ ಮೂರ್ತಿಗಳು

ಈ ಬಾರಿ ವಿವಿಧ ಭಂಗಿಯ ಗಣಪತಿ ಮೂರ್ತಿಗಳು ಮಾರಾಟಕ್ಕಿಡಲಾಗಿದೆ. ಉಗ್ರ ನರಸಿಂಹನ ತೊಡೆಯ ಮೇಲೆ ಆಸೀನನಾದ ಗಣಪ ಹಾಗೂ ನಂದಿಯ ಮೇಲೆ ಕುಳಿತಿರುವ ವಿನಾಯಕ ಸೇರಿ ವಿವಿಧ ಭಂಗಿಯ ಪರಿಸರ ಸ್ನೇಹಿ ಮೂರ್ತಿಗಳು ಗಮನ ಸೆಳೆದವು. ಮೂರ್ತಿಗಳ ಗಾತ್ರ ಮತ್ತು ಅಲಂಕಾರಕ್ಕೆ ತಕ್ಕಂತೆ ₹400 ರಿಂದ ಗರಿಷ್ಠ ₹15,000 ವರೆಗೆ ದರ ನಿಗದಿಪಡಿಸಲಾಗಿತ್ತು.

ಗಾಂಧಿ ಬಜಾರ್‌ನಲ್ಲಿ ಜನಸಾಗರ

ಒಂದೇ ದಿನ ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬಗಳು ಬಂದಿವೆ. ಈ ಹಿನ್ನೆಲೆ ಹಬ್ಬದ ಖರೀದಿ ಬಿರುಸು ಪಡೆದಿದೆ. ಗಾಂಧಿ ಬಜಾರ್‌ನಲ್ಲಿ ಜನಸಂದಣಿ ಹೆಚ್ಚಿತ್ತು. ಹೂವು, ಹಣ್ಣು, ತರಕಾರಿ, ಅಲಂಕಾರಿಕ ವಸ್ತುಗಳ ಖರೀದಿ ಜೋರಿತ್ತು.

Bhovi Samaja Prathiba Puraskara

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ