ಶಿವಮೊಗ್ಗದಲ್ಲಿ ಅಡ್ಡಾದಿಡ್ಡಿ ಆಟೋ ಚಾಲನೆ, ಕಂಟ್ರೋಲ್‌ ರೂಂಗೆ ವಿಡಿಯೋ ಕಳಿಸಿದ ಜನ, ಆಮೇಲೆ ಆಗಿದ್ದೇನು?

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಹೆದ್ದಾರಿಯಲ್ಲಿ ಆಡ್ಡಾದಿಡ್ಡಿ ಆಟೋ ಚಲಾಯಿಸಿದ ಚಾಲಕನಿಗೆ ಶಿವಮೊಗ್ಗದ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಶನಿವಾರ ರಾತ್ರಿ ಆಯನೂರು ಗೇಟ್‌ ಸರ್ಕಲ್‌ ಬಳಿ ಸಾಗರ ರಸ್ತೆಯಲ್ಲಿ ಆಟೋ ಆಡ್ಡಾದಿಡ್ಡಿ ಚಲಿಸುತಿತ್ತು. ಇತರೆ ವಾಹನ ಸವಾರರು ಇದರ ವಿಡಿಯೋ ಚಿತ್ರೀಕರಿಸಿಕೊಂಡು ಕಂಟ್ರೋಲ್‌ ರೂಂಗೆ ರವಾನಿಸಿದ್ದರು. ಇದರ ಆಧಾರದಲ್ಲಿ ಸಂಚಾರ ಠಾಣೆ ಪೊಲೀಸರು ಆಟೋ ಚಾಲಕನನ್ನು ಠಾಣೆಗೆ ಕರೆತಂದು ಪರೀಕ್ಷಿಸಿದರು. ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Auto-Driver-Booked-for-Drink-and-Drive-by-Shivamogga-Traffic-Police

ಮದ್ಯ ಸೇವಿಸಿ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಅಡ್ಡಾದಿಡ್ಡಿ ಆಟೋ ಚಾಲಯಿಸಿದ್ದಕ್ಕಾಗಿ ಆಟೋ ಚಾಲಕನ ವಿರುದ್ಧ ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಆಟೋ ಚಾಲಕನ ಅಡ್ಡಾದಿಡ್ಡಿ ಚಾಲನೆ ಮತ್ತು ಎಫ್‌ಐಆರ್‌ ದಾಖಲಾಗಿರುವ ವಿಡಿಯೋವನ್ನು ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

Bhovi Samaja Prathiba Puraskara

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ