ಕರೆಂಟ್‌ ಶಾಕ್‌, ಲೈನ್‌ಮ್ಯಾನ್‌ ಸ್ಥಳದಲ್ಲೆ ಸಾವು, ಹೇಗಾಯ್ತು ಘಟನೆ?

ಹೊಳೆಹೊನ್ನೂರು: ಸಮೀಪದ ಲಕ್ಷ್ಮೀಪುರ ಕ್ಯಾಂಪ್ ಬಳಿ ಬುಧವಾರ ರೈತರ ಜಮೀನಿನ ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಆನವೇರಿ ಘಟಕದ ಲೈನ್‌ಮನ್ ಎಸ್. ಜೆ.ಸಂಜಯ್ ದತ್(33) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರೈತರೊಬ್ಬರು ಜಮೀನಿನ ಪಂಪ್‌ಸೆಟ್‌ಗೆ ವಿದ್ಯುತ್ ತೊಂದರೆ ಆಗಿರುವ ಬಗ್ಗೆ ಮೆಸ್ಕಾಂ ಕಚೇರಿಗೆ ತಿಳಿಸಿದ್ದರು. ದುರಸ್ತಿಗೆಂದು ಟ್ರಾನ್ಸ್‌ಫಾರ್ಮ‌ರ್ ಕಂಬ ಹತ್ತಿದಾಗ ವಿದ್ಯುತ್ ಪ್ರವಹಿಸಿದೆ.

Lineman-Sanjya-Dutt-No-more

ಸಂಜಯ್ ದತ್ ಈ ಹಿಂದೆ ಆಯನೂರು ವಲಯದಲ್ಲಿ ಕಾರ್ಯನಿರ್ವಹಿಸಿ 4 ವರ್ಷಗಳ ಹಿಂದೆ ಹೊಳೆಹೊನ್ನೂರಿಗೆ ವರ್ಗಾವಣೆಗೊಂಡಿದ್ದರು. ಮೃತರಿಗೆ ಪತ್ನಿ, 3 ವರ್ಷದ ಪುತ್ರಿ ಹಾಗೂ ಒಂದು ತಿಂಗಳ ಹಸುಗೂಸು ಇದೆ. ಸಂಬಂಧಿಕರು ಹಾಗೂ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.