ಶಿವಮೊಗ್ಗ ಲೈವ್
ಶಿವಮೊಗ್ಗ: ಶಾಲಾ ಶಿಕ್ಷಕಿಯೊಬ್ಬರಿಗೆ RTO ಚಲನ್ ಹೆಸರಿನಲ್ಲಿ ವಂಚಿಸಿ, ಅವರ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್ನಿಂದ ಒಟ್ಟು ₹1,59,857 ಹಣ ದೋಚಲಾಗಿದೆ.
ಶಿಕ್ಷಕಿ ಶಾಲೆಯಲ್ಲಿದ್ದ ವೇಳೆ ಮಕ್ಕಳು ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ, ಅಪರಿಚಿತ ವ್ಯಕ್ತಿಗಳು RTO ಚಲನ್ APK ಫೈಲ್ ಅನ್ನು ಇನ್ಸ್ಟಾಲ್ ಮಾಡಿಸಿದ್ದಾರೆ. ಬಳಿಕ ಅವರ ವೈಯಕ್ತಿಕ ಮಾಹಿತಿ ಹಾಗೂ ಒಟಿಪಿ ಪಡೆದುಕೊಂಡು, ವಿವಿಧ ಹಂತಗಳಲ್ಲಿ ₹60,000, ₹10,000, ₹29,000, ₹10,000, ₹3,500 ಹಾಗೂ ಕ್ರೆಡಿಟ್ ಕಾರ್ಡ್ನಿಂದ ₹47,357 ಸೇರಿದಂತೆ ಒಟ್ಟು ₹1,59,857 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ತಡವಾಗಿ ಮಾಹಿತಿ ತಿಳಿದು ಶಿವಮೊಗ್ಗ CEN ಪೊಲೀಸ್ ಠಾಣೆಗೆ ಶಿಕ್ಷಕಿ ದೂರು ನೀಡಿದ್ದಾರೆ. ಘಟನೆ ಸಂಬಂಧ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.