ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಸೆಪ್ಟೆಂಬರ್ 27ರ ಸಂಜೆ 4.35ಕ್ಕೆ 2ನೇ ವರ್ಷದ ಯಕ್ಷ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ. ಯಕ್ಷ ಸಂಗಮ ಬಳಗ, ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ಪ್ರಸಿದ್ಧ ಕಲಾವಿದರ ಒಕ್ಕೂಟದ ಸಂಯೋಜನೆಯಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ.
ಪೌರಾಣಿಕ ಪ್ರಸಂಗಗಳಾದ ಶ್ರೀ ಕೃಷ್ಣ ಕೃಷ್ಣಾರ್ಜುನ ಮತ್ತು ಶ್ರೀರಾಮ ಲವಕುಶ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಗೌರವ ಪ್ರವೇಶ ಹೊರತುಪಡಿಸಿ ಸಾರ್ವಜನಿಕರ ಪ್ರವೇಶಕ್ಕೆ ₹200 ಶುಲ್ಕ ನಿಗದಿಪಡಿಸಲಾಗಿದೆ. ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845863549 ಸಂಪರ್ಕಿಸಬಹುದು.

ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ದರ್ಶನ್ ಗೌಡ ಗೋಳಿಹೊಳೆ ಭಾಗವತಿಕೆ ನಡೆಸಲಿದ್ದಾರೆ. ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ ಹಾಗೂ ಚಂಡೆಯಲ್ಲಿ ಸುಜನ್ ಹಾಲಾಡಿ, ಪ್ರಜ್ವಲ್ ಮುಂಡಾಡಿ ಸಾಥ್ ನೀಡಲಿದ್ದಾರೆ.
ಮುಮ್ಮೇಳದ ಪ್ರಸಿದ್ಧ ಕಲಾವಿದರಾದ ವಿದ್ಯಾಧರ ರಾವ್ ಜಲವಳ್ಳಿ, ನಿಲ್ಕೋಡ್ ಶಂಕರ ಹೆಗಡೆ, ಶಶಿಕಾಂತ್ ಶೆಟ್ಟಿ ಕಾರ್ಕಳ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಹೆಗಡೆ ಕಡಬಾಳ, ವಿಶ್ವನಾಥ್ ಆಚಾರ್ಯ ತೊಂಭಟ್ಟು, ಸುಧೀರ್ ಉಪ್ಪೂರು, ಹರೀಶ್ ಮೊಗವೀರ ಜಪ್ತಿ, ಸಂತೋಷ್ ಹೆಂಗವಳ್ಳಿ, ಕೆ.ಜೆ. ಕಾರ್ತಿಕ್, ರವೀಂದ್ರ ದೇವಾಡಿಗ ಕಮಲಶಿಲೆ, ಪುರಂದರ ಮೂಡ್ಕಣಿ ಹಾಗೂ ಆತ್ರೇಯ ಗಾಂವ್ಕರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ.