ಸಕ್ರೆಬೈಲು ಬಿಡಾರದಲ್ಲಿ ಏಕಾಏಕಿ ಕುಸಿದು ಬಿದ್ದು ಶೌರ್ಯ ಆನೆ ಸಾವು, ಆಗಿದ್ದೇನು?

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಶೌರ್ಯ (35) ಆನೆ ತಡರಾತ್ರಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ. ಕಾಲಿನ ಗಾಯ ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆನೆ ಸಾವನ್ನಪ್ಪಿದೆ.

ಎಡಗಡೆಯ ಹಿಂಬದಿ ಕಾಲಲಿನ ತೊಡೆ ಭಾಗದಲ್ಲಿ ತೀವ್ರ ಗಾಯವಾಗಿತ್ತು. ಅದು ಕೊಳೆತ ಸ್ಥಿತಿಯಿಂದಾಗಿ ಶೌರ್ಯ ಆನೆ ಕಳೆದ ಮೂರು ತಿಂಗಳಿನಿಂದ ನರಳುತ್ತಿತ್ತು. ಅರಣ್ಯ ಇಲಾಖೆಯ ವೈದ್ಯರು ಹಾಗೂ ಇತ್ತೀಚೆಗೆ ಹಾತಿ ಸಂಸ್ಥೆಯ ವೈದ್ಯರ ತಂಡ ಆನೆಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನೆ ಕೊನೆ ಉಸಿರೆಳೆದಿದೆ.

Shourya-Elephants-ends-life-at-Sakrebyle-Camp-in-Shivamogga

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಈ ಕಾಡಾನೆಯನ್ನು 2026ರ ಫೆಬ್ರವರಿ 22ರಂದು ಸೆರೆಹಿಡಿಯಲಾಗಿತ್ತು. ಬಳಿಕ ಸಕ್ರೆಬೈಲು ಬಿಡಾರಕ್ಕೆ ತಂದು ಸುಮಾರು ಮೂರು ತಿಂಗಳ ಕಾಲ ಕ್ರಾಲ್‌ನಲ್ಲಿ ಬಂಧಿಸಿ ಪಳಗಿಸಲಾಗಿತ್ತು. ಮೇ ತಿಂಗಳಿನಲ್ಲಿ ಕ್ರಾಲ್‌ನಿಂದ ಶಾಂತವಾಗಿ ಹೊರಬಂದಿದ್ದ ಶೌರ್ಯಗೆ ಬಿಡಾರದಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಶೌರ್ಯ ಆನೆಯ ಸಾವಿನಿಂದಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿರುವ ಒಟ್ಟು ಆನೆಗಳ ಸಂಖ್ಯೆ 23ಕ್ಕೆ ಇಳಿಕೆಯಾಗಿದೆ.