ತೀವ್ರ ಗಾಯಗೊಂಡಿದ್ದ 8 ವರ್ಷದ ಬಾಲಕ ಸಾವು, ಆಗಿದ್ದೇನು?

ಸಾಗರ: ಗೂಡ್ಸ್‌ ಆಟೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ದಾಸಕೊಪ್ಪ ಗ್ರಾಮದ ತನ್ಮಯ್‌ ಮೃತ ಬಾಲಕ.

ಸೆಪ್ಟೆಂಬರ್‌ 27ರ ಸಂಜೆ ದಾಸಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನದ ಬಳಿ ಅಪಘಾತ ಸಂಭವಿಸಿತ್ತು. ರಸ್ತೆ ಬದಿ ನಿಂತಿದ್ದ ತನ್ಮಯ್‌ಗೆ ಆಟೋದ ಗ್ರಿಲ್‌ ಬಡಿದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಆನಂದಪುರದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

Eight-year-old-Tanmay-no-more

ತನ್ಮಯ್‌ನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಬಾಲಕ ಮೃತಪಟ್ಟಿದ್ದಾನೆ. ತನ್ಮಯ್‌ ದಾಸಕೊಪ್ಪ ಗ್ರಾಮದ ಪ್ರಶಾಂತ್‌ ಅವರ ಪುತ್ರ. ಘಟನೆ ಕುರಿತು ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.