ಜೆಎನ್‌ಎನ್‌ ಕಾಲೇಜಿನಲ್ಲಿ ನಾಸಾ ಸ್ಪೇಸ್‌ ಚಾಲೆಂಜ್‌, ಇಂದೇ ನಿಮ್ಮ ಹೆಸರು ಬರೆಯಿಸಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ: ನಗರದ ಜೆ.ಎನ್‌.ಎನ್‌. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಾಸಾ ವತಿಯಿಂದ ನವೆಂಬರ್ 14 ಮತ್ತು 15ರಂದು ಆಯೋಜಿಸಿರುವ ನಾಸಾ ಸ್ಪೇಸ್‌ ಚಾಲೆಂಜ್‌ ಜಾಗತಿಕ ಹ್ಯಾಕಥಾನ್‌‌ ಕಾರ್ಯಕ್ರಮಕ್ಕೆ 8ನೇ ತರಗತಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳು ಮತ್ತು ಆಸಕ್ತರಿಂದ ಉಚಿತ ನೋಂದಣಿಗೆ ಆಹ್ವಾನಿಸಲಾಗಿದೆ.

ವಿಜ್ಞಾನ, ಕೋಡಿಂಗ್, ವಿನ್ಯಾಸ, ಸಂಶೋಧನೆ ಹಾಗೂ ಸೃಜನಶೀಲತೆಯಲ್ಲಿ ಆಸಕ್ತಿ ಹೊಂದಿರುವ ವಿವಿಧ ವಿಭಾಗಗಳ ವಿದ್ಯಾರ್ಥಿಗಳು 1 ರಿಂದ 6 ಸದಸ್ಯರ ತಂಡ ರಚಿಸಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

JNNCE-college-Engineering-Shimoga

ನಾಸಾ ಹಾಗೂ ಅದರ ಪಾಲುದಾರ ಬಾಹ್ಯಾಕಾಶ ಸಂಸ್ಥೆಗಳ ಮುಕ್ತ ದತ್ತಾಂಶವನ್ನು ಬಳಸಿಕೊಂಡು ಭೂಮಿ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ನೈಜ ಸಮಸ್ಯೆಗಳಿಗೆ ತಾಂತ್ರಿಕ ಹಾಗೂ ಸೃಜನಾತ್ಮಕ ಪರಿಹಾರಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಆಸಕ್ತರು ನೋಂದಣಿಗಾಗಿ ವಿದ್ಯಾರ್ಥಿ ಸಂಯೋಜಕರಾದ ಐಶ್ವರ್ಯ.ಎಂ 8217013839 ಹಾಗೂ ಅನನ್ಯ.ಎ 8073653664 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.