ಶಿವಮೊಗ್ಗ ದಸರಾ, ವೇದಿಕೆಗೆ ಶಂಕುಸ್ಥಾಪನೆ, ಏನಂದ್ರು ಎಂಎಲ್‌ಎ?

ಶಿವಮೊಗ್ಗ: ಅಲ್ಲಮಪ್ರಭು ಮೈದಾನದಲ್ಲಿ ಶಿವಮೊಗ್ಗ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವೇದಿಕೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಚನ್ನಬಸಪ್ಪ, ‘ದಸರಾ ಸಾಂಸ್ಕೃತಿಕ ಸಂಭ್ರಮವನ್ನು ಸಾರ್ವಜನಿಕರು ಆರಾಮವಾಗಿ ವೀಕ್ಷಿಸಲು ಅನುವಾಗುವಂತೆ ವೇದಿಕೆ, ವಿಶಾಲ ಆಸನ ವ್ಯವಸ್ಥೆ ಹಾಗೂ ಮೂಲಸೌಕರ್ಯ ಅಚ್ಚುಕಟ್ಟಾಗಿ ಸಜ್ಜುಗೊಳಿಸಬೇಕು. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಮುನ್ನವೇ ಪೂರ್ಣಗೊಳಿಸಬೇಕು.’

Dasara-Stage-at-Allamaprabhu-Ground-in-Shivamogga

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಭಾಕರ್ ಪಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.